ಸಂಕ್ಷಿಪ್ತ ವಿವರಣೆ

ಕಲ್ಯಾಣ ಕರ್ನಾಟಕ ವಿಭಾಗದ 06 ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು, ಕೊಪ್ಪಳ ಮತ್ತು ಬೀದರ ಗಳಲ್ಲಿ ಸರ್ವರ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸುವ ನಿಟ್ಟಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವನ್ನು ರಚಿಸಿ, ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಧುರಿಣರು ಮಾಜಿ ಸಂಸದರು ಹಾಗೂ ಮಾಜಿ ರಾಜ್ಯಸಭೆ ಸದಸ್ಯರಾದ ಡಾ. ಬಸವರಾಜ ಪಾಟೀಲ್ ಸೇಡಂರವರನ್ನು ಸಂಘದ ಅಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಿ, ಸಚಿವ ದರ್ಜೆ ಸ್ಥಾನಮಾನ ಒದಗಿಸಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ. 500.00 ಕೋಟಿ ಅನುದಾನ ಒದಗಿಸುವದಾಗಿ ಬಜೆಟನಲ್ಲಿ ಘೋಷಿಸಿರುತ್ತಾರೆ.

ಸಂಘವು ಅಧ್ಯಕ್ಷರು ಮತ್ತು 15 ಜನ ಆಡಳಿತ ಮಂಡಳಿ ಸದಸ್ಯರನ್ನು ಹೊಂದಿದ್ದು, ಸಂಘದ ವಿವಿಧ ಉದ್ದೇಶಗಳನ್ನು ಜಾರಿಗೆ ತರಲು ಮಾರ್ಗದರ್ಶನ ನೀಡಲು ಕೆಳಕಾಣಿಸಿದಂತೆ, ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಮತ್ತು ಅನುಭವ ಹೊಂದಿರುವ 05 ಜನ ತಜ್ಞರನ್ನು ಆಡಳಿತಾತ್ಮಕ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಗಿರುತ್ತದೆ.

  1. ಡಾ|| ಗುರುರಾಜ ಕರ್ಜಗಿ ಶಿಕ್ಷಣ ತಜ್ಞರು ಬೆಂಗಳೂರು.
  2. ಶ್ರೀ ಮದನಗೋಪಾಲ್ ಭಾ.ಆ.ಸೇ, ಅಪರ ಮುಖ್ಯ ಕಾರ್ಯದರ್ಶಿಗಳು (ನಿ.) ಬೆಂಗಳೂರು.
  3. ಶ್ರೀ ಎಸ್.ಎ.ಪಾಟೀಲ್, ನಿವೃತ್ತ ನಿರ್ದೇಶಕರು, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನವದೆಹಲಿ ಮತ್ತು ಅಧ್ಯಕ್ಷರು, ಕರ್ನಾಟಕ ಕೃಷಿ ಮಿಷನ್, ಕರ್ನಾಟಕ ಸರ್ಕಾರ ಹಾಗೂ ಉಪ-ಕುಲಪತಿಗಳು (ನಿ.) ಕೃಷಿ ವಿಶ್ವವಿದ್ಯಾಲಯ, ಧಾರವಾಡ
  4. ಶ್ರೀ ಎನ್.ಎಂ.ಬಿರಾದಾರ-ಚಾಣಕ್ಯ ಕರಿಯರ್ ಅಕಾಡೆಮಿ ವಿಜಯಪೂರ.
  5. ಶ್ರೀ ಮಹಾಬಲೇಶ್ವರಪ್ಪ ಕೊಪ್ಪಳ.

ಸಂಘದ ಕಾರ್ಯವನ್ನು ಸಫಲವಾಗಿ ನೆರವೇರಿಸುವ ದೃಷ್ಟಿಯಿಂದ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಶಿಶು ಹಂತದಿಂದ ಉನ್ನತ ಶಿಕ್ಷಣದವರೆಗೆ ಗ್ರಾಮೀಣ ಯುವಕ ಯುವತಿಯರನ್ನು ಕೇಂದ್ರವಾಗಿಟ್ಟುಕೊಂಡು ಗ್ರಾಮವಾರು ಒಟ್ಟು 4174 ಸಾಂಸ್ಕøತಿಕ ಸಂಪರ್ಕ ಕೇಂದ್ರಗಳ ಮೂಲಕ ಹಾಗೂ ಒಂದು ಸಾವಿರ ಪ್ರಶಿಕ್ಷಣ ಕೇಂದ್ರಗಳ ಮುಖಾಂತರ ಕೆಳಗಿನ ಗುರಿಗಳನ್ನು ಮುಟ್ಟಲು ಆಯೋಜಿಸಲಾಗಿದೆ.

ಗುರಿ ಮತ್ತು ಉದ್ದೇಶ

1. ಕೃಷಿ

  • 50 ಸಾವಯವ ಕೃಷಿ ಕೇಂದ್ರಗಳ ಸ್ಥಾಪನೆ ಹಾಗೂ 5000 ಸಾವಯವ ಕೃಷಿಕರನ್ನು ಗುರುತಿಸಿ ತರಬೇತಿ ನೀಡುವುದು ಹಾಗೂ ಪ್ರೋತ್ಸಾಹಿಸುವುದು.
  • ಕೋಟಿ ವೃಕ್ಷ ಯೋಜನೆಯಡಿಯಲ್ಲಿ 6 ಜಿಲ್ಲೆಗಳಲ್ಲಿ ಒಂದುಕೋಟಿ ವಿವಿಧ ಬಗೆಯ ಗಿಡ ಮರಗಳನ್ನು ನೆಡುವುದು.
  • ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 10 ಲಕ್ಷ ವಿವಿಧ ಹಣ್ಣಿನ ಗಿಡಗಳನ್ನು ನೆಡುವುದು ಮತ್ತು ಸಂರಕ್ಷಿಸುವುದು. ಒಬ್ಬ ವ್ಯಕ್ತಿ - ಒಂದುಗಿಡ - ಯೋಜನೆ ಅನುಷ್ಠಾನಗೊಳಿಸಲು ಪ್ರೊತ್ಸಾಹಿಸುವುದು.
  • ಕಲ್ಯಾಣಕರ್ನಾಟಕ ಪ್ರದೇಶದಲ್ಲಿ 100 ದೇಶಿ ಹಸುಗಳ ಸಂವರ್ಧನಾ ಕೇಂದ್ರಗಳನ್ನು ಸ್ಥಾಪಿಸುವುದು ಹಾಗೂ ಪ್ರೊತ್ಸಾಹಿಸುವುದು.
  • ಕೃಷಿಯಲ್ಲಿ ಮುಂದುವರೆದ ದೇಶಗಳ ತಂತ್ರಾಜ್ಞಾನದ ಪ್ರಾತ್ಯಕ್ಷತೆಗಾಗಿ ರೈತರಿಗೆ ವಿದೇಶ ಪ್ರವಾಸ ಕೈಗೊಳ್ಳುವುದು.

2. ಶಿಕ್ಷಣ ಮತ್ತು ಸಾಹಿತ್ಯ

  • ಸುಮಾರು 10,000 ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುವುದು.
  • ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ ಸೇಮಿನಾರ್, ಪ್ರವಚನ ಮತ್ತು ಪ್ರೇರಣಾತ್ಮಕ ಭೋದನೆಗಳನ್ನು ಏರ್ಪಡಿಸುವುದು.
  • ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಾದ (ಕೆ.ಪಿ.ಎಸ್.ಸಿ., ಯು.ಪಿ.ಎಸ್.ಸಿ., ಬ್ಯಾಂಕ್, ಪಿ.ಯು.ಸಿ., ಸಿ.ಇ.ಟಿ., ಎನ್.ಇ.ಇ.ಟಿ., ಜೆ.ಇ.ಇ., ಇತ್ಯಾದಿ) ವಾರ್ಷಿಕ 6 ಸಾವಿರ ವಿದ್ಯಾರ್ಥಿಗಳಿಗೆ ಗುಣಾತ್ಮಕವಾದ ಉಚಿತ ತರಬೇತಿ ನೀಡುವುದು.
  • ಮಾನವ ಸಮಗ್ರ ಬೆಳವಣೆಗಾಗಿ ಪೂರಕವಾಗಿರುವ ನಿಯತಕಾಲಿಕೆಗಳು ಹಾಗೂ ಪುಸ್ತಕಗಳನ್ನು ಪ್ರಕಟಿಸುವುದು.

3. ಸ್ವಯಂ ಉದ್ಯೋಗ

  • ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ, ಪ್ರಸಕ್ತ ವರ್ಷದಲ್ಲಿ 1000 ಹೊಲಿಗೆ ಹಾಗೂ ಕಸೂತಿ ಕೇಂದ್ರಗಳ ಸ್ಥಾಪನೆ.
  • ಪ್ರಸಕ್ತ ವರ್ಷದಲ್ಲಿ 3 ಲಕ್ಷ ಅನಕ್ಷರಸ್ಥ ನಿರುದ್ಯೋಗಿಗಳಿಗೆ, ಕೌಶಲ್ಯ ತರಬೇತಿ ನೀಡುವುದು.
  • ಉದ್ಯೋಗ ಮೇಳಗಳನ್ನು ಆಯೋಜಿಸಿ ಅರ್ಹರಿಗೆ ಉದ್ಯೋಗ ಒದಗಿಸಲು ಕ್ರಮ ಜರುಗಿಸುವುದು.

4. ಆರೋಗ್ಯ

  • ಆರೋಗ್ಯ ಶಿಬಿರಗಳನ್ನು ಹಾಗೂ ಆರೋಗ್ಯ ಕುರಿತು ತರಬೇತಿಗಳನ್ನು ನೀಡುವುದು.
  • ಯೋಗ ತರಬೇತಿ ಶಿಬಿರಗಳನ್ನು ಆಯೋಜಿಸುವುದು. ಪ್ರಸಕ್ತ ವರ್ಷದಲ್ಲಿ 100 ಯೋಗ ಶಿಬಿರಗಳನ್ನು ಆಯೋಜಿಸುವುದು.
  • ಪ್ರಾಚೀನ ಪರಂಪರಾಗತ ವೈದ್ಯಕೀಯ ಪದ್ದತಿ ಹಾಗೂ ಔಷದಿಗಳ ಕುರಿತು ತರಬೇತಿ ನೀಡುವ ಶಿಬಿರಗಳನ್ನು ಆಯೋಜಿಸುವುದು. ಪ್ರಸಕ್ತ ವರ್ಷದಲ್ಲಿ 1000 ಶಿಬಿರಗಳನ್ನು ಆಯೋಜಿಸುವುದು.

5. ಯುವಜನ ಸಬಲೀಕರಣ

  • ಯುವಕ-ಯುವತಿಯರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
  • ಪ್ರಸಕ್ತ ವರ್ಷದಲ್ಲಿ 10,000 ಯುವ ಜನರಲ್ಲಿ ಜಾಗೃತಿ ಮೂಡಿಸುವ ತರಬೇತಿ ನೀಡಲಾಗುವುದು.
  • ಯುವಕರಲ್ಲಿ ದೇಶಾಭಿಮಾನ ಮೂಡಿಸುವ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಆಯೋಜಿಸುವುದು.
  • ದೇಶ-ವಿದೇಶದಲ್ಲಿ ಯಶಸ್ವಿಯಾದ ವ್ಯಕ್ತಿಗಳ ಮುಖಾಂತರ ತರಬೇತಿ ಶಿಬಿರ ಏರ್ಪಡಿಸುವುದು.

6. ಮಹಿಳಾ ಸಬಲೀಕರಣ

  • ಮಹಿಳಾ ಸಬಲೀಕರಣದ ಜಾಗೃತಿ ಮೂಡಿಸುವ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸುವುದು.
  • ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು.
  • ಶೈಕ್ಷಣಿಕ, ಧಾರ್ಮಿಕ ಮತ್ತು ಪಾರಂಪರಿಕ ಸ್ಥಳಗಳಿಗೆ ಪ್ರವಾಸ ಆಯೋಜಿಸುವುದು.
  • ಮಹಿಳೆಯರ ಆರೋಗ್ಯ ಶಿಬಿರಗಳನ್ನು ಆಯೋಜಿಸುವುದು.
  • ಮಹಿಳೆಯರಿಗೆ ಸ್ವದೇಶಿ ಉತ್ಪನ್ನಗಳ ಕುರಿತು ತಯಾರಿಕೆ ಕುರಿತು ಪ್ರಾತಿಕ್ಷಕೆ ಶಿಬಿರಗಳನ್ನು ಆಯೋಜಿಸುವುದು.

7. ನೈತಿಕತತ್ವ

  • ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನೈತಿಕತೆಯ ತರಬೇತಿ ನೀಡಲು 100 ಕೇಂದ್ರಗಳನ್ನು ಸ್ಥಾಪಿಸುವುದು. ಮಹಾದಾಸೋಹಿ ಬಸವಣ್ಣನವರ ಹಾಗೂ ನಾಡಿನ ಇತರ ಶರಣರ ಆದರ್ಶ ತತ್ವಗಳನ್ನು ಅಳವಡಿಸುವ ಕುರಿತು ಕಾರ್ಯಕ್ರಮಗಳನ್ನು ಹಾಗೂ ಗ್ರಾಮೀಣ ಕಲೆ ಸಂಸ್ಕೃತಿ ಉತ್ತೇಜಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದು. ಕಲ್ಯಾಣಕರ್ನಾಟಕ ವಿಭಾಗದ ಕಲೆ, ಸಾಹಿತ್ಯ, ವಿಜ್ಞಾನ, ಸಂಸ್ಕೃತಿ ಮತ್ತು ಕ್ರೀಡೆಗಳ ಮಹತ್ವವನ್ನು ತಿಳಿಯಪಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದು.

8. ಕಟ್ಟಡ ಕಾಮಗಾರಿಗಳು

  • ಮೇಲಿನ ಕಾರ್ಯಕ್ರಮಗಳನ್ನು ಆಯೋಜಿಸಲು ಅಗತ್ಯವಿರುವ ಸಿವಿಲ್ ಸ್ವರೂಪದ ಕಟ್ಟಡ ಕಾಮಗಾರಿಗಳನ್ನು ಅಗತ್ಯವಿರುವಲ್ಲಿ ನಿರ್ಮಿಸುವುದು.

9. ಗ್ರಾಮ ಸಬಲೀಕರಣ

  • ಅಧ್ಯಕ್ಷರ ಮಾರ್ಗದರ್ಶನ ಮೇರೆಗೆ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದಂತೆ ಗ್ರಾಮಗಳ ಸಬಲೀಕರಣಕ್ಕಾಗಿ ಆರ್ಥಿಕ ಉತ್ತೇಜನ ನೀಡುವ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು.