ವಿವಿಧ ಸ್ವಯಂ ಉದ್ಯೋಗ ಯೋಜನೆಗಳ ತರಬೇತಿ ವಿಧಾನ:
(ಟೆಲರಿಂಗ, ಸಲೂನ್, ಬೇಕರಿ, ಕಂಪ್ಯೂಟರ್ ರಿಪೇರಿ, ವೆಲ್ಡಿಂಗ್ ಮತ್ತು ಫ್ಯಾಬ್ರಿಕೇಶನ್, ಬೋರವೆಲ್ ರಿಪೇರಿ, ವಾಹನ ಚಾಲನ, ಸೆಕ್ಯೂರಿಟಿ ಗಾರ್ಡ, ಆರೋಗ್ಯ ಸಹಾಯಕ, ವೇದಿಕೆ ಅಲಂಕಾರ, ಗೃಹ ಉದ್ದಿಮೆ ಮತ್ತು ಕುಷ್ಠರೋಗ ಬಾಧಿತರು ಹಾಗೂ ತೃತೀಯ ಲಿಂಗಿಗಳಿಗೆ ಸ್ವಯಂ ಉದ್ಯೋಗ ತರಬೇತಿ ಇತ್ಯಾದಿ.)
|
1 |
ತರಬೇತಿ ನೀಡುವ ಸಂಸ್ಥೆಗಳನ್ನು ಆಯ್ಕೆ ಮಾಡುವ ವಿಧಾನ |
|
|
ವಿಭಾಗ ಮಟ್ಟದಲ್ಲಿ ಆಯ್ಕೆ ಸಮಿತಿ ರಚಿಸಿ ತರಬೇತಿ ಸಂಸ್ಥೆಗಳ ಅರ್ಹತೆ ಮಾನದಂಡ ನಿಗದಿ ಪಡಿಸಿ ಅದರಂತೆ ರಾಜ್ಯ ಮತ್ತು ವಿಭಾಗ ಮಟ್ಟದಲ್ಲಿ ಅನುಭವ ಹೊಂದಿದ ಹಾಗೂ ಕಳೆದ 5-10 ವರ್ಷಗಳ ಅವಧಿಯಿಂದ ತರಬೇತಿ ನೀಡುವಲ್ಲಿ ಸಕ್ರಿಯವಾಗಿರುವ ಮತ್ತು ಸರ್ಕಾರದಿಂದ ನಿಗದಿತ ವಿದ್ಯಾರ್ಹತೆ ಹೊಂದಿರುವ ಪೂರ್ಣಾವಧಿ ಸಿಬ್ಬಂಧಿ ಹೊಂದಿರುವ ಸಂಸ್ಥೆಗಳಿಂದ ಅರ್ಜಿಗಳನ್ನು ಅಹ್ವಾನಿಸಿ (Expression of interest) ತರಬೇತಿ ನೀಡುವ ಸಂಸ್ಥೆಗಳನ್ನು ಆಯ್ಕೆ ಮಾಡುವುದು. |
|
|
-
ವಿಭಾಗ ಮಟ್ಟದ ಆಯ್ಕೆ ಸಮಿತಿ :-
- ಸಂಘದ ಆಡಳಿತ ಮಂಡಳಿ ನಿರ್ಣಯಿಸಿದ ವಿಷಯ ತಜ್ಞರು.
- ವಿಭಾಗ/ಜಿಲ್ಲಾ ಮಟ್ಟದ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ/ ಪ್ರತಿನಿಧಿ.
- ವಿಭಾಗ/ಜಿಲ್ಲಾ ಮಟ್ಟದ ಕೈಗಾರಿಕಾ ಅಭಿವೃದ್ಧಿ ಇಲಾಖೆ ಅಧಿಕಾರಿ/ಪ್ರತಿನಿಧಿ.
- ಸಂಘದ ಅಧೀನ ಕಾರ್ಯದರ್ಶಿಗಳು.
- ಸಂಘದ ಕಾರ್ಯದರ್ಶಿಗಳು.
-
ತರಬೇತಿ ನೀಡುವ ಸಂಸ್ಥೆಯ ಅರ್ಹತಾ ಮಾನದಂಡಗಳು:-
- ಸಂಸ್ಥೆಯ ಸ್ಥಾಪನೆಯಾಗಿ ಕನಿಷ್ಠ 5 ರಿಂದ 10 ವರ್ಷಗಳಾಗಿರಬೇಕು.
- ಸಂಸ್ಥೆಯ 5 ವರ್ಷಗಳ ಅವಧಿಯ ಲೆಕ್ಕ ಪತ್ರ ವರದಿ ಹೊಂದಿರಬೇಕು.
- ಕಳೆದ 5 ವರ್ಷಗಳಲ್ಲಿ ಸಂಸ್ಥೆಯು ನಿರ್ವಹಿಸಿದ ತರಬೇತಿಗಳ ವಿವರ ಸಲ್ಲಿಸಬೇಕು.
- ತರಬೇತಿ ನೀಡಲು ಸಂಸ್ಥೆ ಹೊಂದಿರುವ ಸಂಪನ್ಮೂಲ ವ್ಯಕ್ತಿಗಳ ವಿವರಗಳು (ಸರ್ಕಾರದಿಂದ ನಿಗದಿ ಪಡಿಸಿದ ವಿದ್ಯಾರ್ಹತೆ ಹೊಂದಿದ) ಹಾಗೂ ಅವರ ವಿದ್ಯಾರ್ಹತೆ ದಾಖಲೆಗಳು ಸಲ್ಲಿಸಬೇಕು.
- ಸಂಸ್ಥೆಯು ನೀಡುವ ತರಬೇತಿ ವಿಷಯಕ್ಕೆ ಸಂಬಂಧಿಸಿದ ಮಾರುಕಟ್ಟೆ ಉದ್ಯಮಿಗಳೊಂದಿಗೆ ಒಪ್ಪಂದ ಹೊಂದಿರುವ ವಿವರಗಳನ್ನು ಸಲ್ಲಿಸಬೇಕು.
- ಈ ಮೊದಲು ಸಂಸ್ಥೆಯಿಂದ ತರಬೇತಿ ಪಡೆದವರು ಉದ್ಯೋಗ ಪಡೆದುಕೊಂಡ ಹಾಗೂ ಸ್ವಯಂ ಉದ್ಯಮಿ ಸ್ಥಾಪಿಸಿದ ವಿವರಗಳನ್ನು ಸಲ್ಲಿಸಬೇಕು.
- ತರಬೇತಿ ಸಂಸ್ಥೆಯು ವಿಷಯವಾರು ತರಬೇತಿಗೆ ವಿಧಿಸುವ ವೆಚ್ಚದ ವಿವರಗಳನ್ನು ಸಲ್ಲಿಸಬೇಕು.
-
ತರಬೇತಿ ನೀಡುವ ಸಂಸ್ಥೆಯು (ಆಯ್ಕೆಯಾದ ನಂತರ) ಜಿಲ್ಲಾ ಮತ್ತು ತಾಲೂಕ ಮಟ್ಟದಲ್ಲಿ ಹೊಂದಿರಬೇಕಾದ ಸೌಲಭ್ಯಗಳು:-
- ತರಬೇತಿ ಹಾಲ್ (ಕನಿಷ್ಠ 30 ರಿಂದ 50 ಜನರಿಗೆ ಕೋವಿಡ್ ಮಾರ್ಗಸೂಚಿ ಅನ್ವಯ ನಿಗದಿತ ಅಂತರ ನಿರ್ವಹಿಸಿ ತರಬೇತಿ ನೀಡಲು ಅಗತ್ಯವಿರುವ ವಿಸ್ತಿರ್ಣ ಅಂದಾಜು 300 ಚದರ ಅಡಿ ಮೇಲ್ಪಟ್ಟು) ಪಡೆದುಕೊಂಡಿರುವ ಒಪ್ಪಂದ ಪತ್ರ.
- ತರಬೇತಿ ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು/ಉಪಕರಣಗಳನ್ನು ಹೊಂದಿರುವ ವಿವರ ನಮೂದಿಸಿದ ರೂ. 100 ಮುಖಬೆಲೆಯ ಒಪ್ಪಂದ ಪತ್ರ.
- ಸ್ಥಳಿಯ ನಿಗದಿತ ವಿದ್ಯಾರ್ಹತೆ ಹೊಂದಿರುವ ವ್ಯಕ್ತಿಗಳ ಸಹಭಾಗಿತ್ವ ಹೊಂದಿರುವ ಒಪ್ಪಂದ ಪತ್ರ.
- ಸಂಘದ ನೀತಿ ನಿಯಮಗಳಿಗೆ ಬದ್ಧವಾಗಿರುವ ಬಗ್ಗೆ ಹಾಗೂ ನಿಗದಿತ ಅವಧಿಯಲ್ಲಿ ತರಬೇತಿ ಪೂರ್ಣಗೊಳಿಸುವ ಕುರಿತು ಒಪ್ಪಂದ ಪತ್ರ.
- ತರಬೇತಿ ಯೋಜನೆಯ ಮೊತ್ತಕ್ಕೆ ಅನುಗುಣವಾಗಿ ಬ್ಯಾಂಕ ಗ್ಯಾರಂಟಿ ಪತ್ರ. (ತರಬೇತಿ ಅಪೂರ್ಣವಾದಲ್ಲಿ ಸದರಿ ಮೊತ್ತ ಮುಟ್ಟುಗೊಲು ಹಾಕಿಕೊಳ್ಳಲಾಗುವುದು.)
|
|
2 |
ತರಬೇತಿ ಯೋಜನೆಗಳ ಫಲಾನುಭವಿಗಳಆಯ್ಕೆ ವಿಧಾನ |
|
|
-
ತಾಲೂಕ ಮಟ್ಟದ ಆಯ್ಕೆ ಸಮಿತಿ ಸದಸ್ಯರು:-
- ತಾಲೂಕ ಮಟ್ಟದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆಗಾಗಿ ಸಂಘದಿಂದ ನಿಯೋಜಿಸಲಾಗಿರುವ ಸಂಪನ್ಮೂಲ ವ್ಯಕ್ತಿ.
- ತಾಲೂಕಾ ಮಟ್ಟದ ಕೈಗಾರಿಕಾ ವಿಸ್ತೀರ್ಣಾಧಿಕಾರಿ/ಪ್ರತಿನಿಧಿ.
- ಕಾರ್ಯನಿರ್ವಾಹಕ ಅಧಿಕಾರಿ ತಾಲೂಕ ಪಂಚಾಯತ್ ಇವರ ಪ್ರತಿನಿಧಿ.
-
ಜಿಲ್ಲಾ ಮಟ್ಟದ ಆಯ್ಕೆ ಸಮಿತಿ:-
- ಜಿಲ್ಲಾ ಮಟ್ಟದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆಗಾಗಿ ಸಂಘದಿಂದ ನಿಯೋಜಿಸಲಾಗಿರುವ ಸಂಪನ್ಮೂಲ ವ್ಯಕ್ತಿ.
- ಸಂಬಂಧಿತ ಜಿಲ್ಲೆಯಲ್ಲಿ ನಾಮನಿರ್ದೆಶನಗೊಂಡಿರುವ ಸಂಘದ ಆಡಳಿತ ಮಂಡಳಿ ಸದಸ್ಯರು.
- ಜಿಲ್ಲಾ ಕೈಗಾರಿಕಾ ಅಭಿವೃದ್ಧಿ ಇಲಾಖೆ ಅಧಿಕಾರಿ/ಪ್ರತಿನಿಧಿ.
- ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ/ಪ್ರತಿನಿಧಿ.
|
|
3 |
ತರಬೇತಿಗಾಗಿ ಫಲಾನುಭವಿಗಳ ಅರ್ಹತೆ |
|
|
- ಎಸ್.ಎಸ್.ಎಲ್.ಸಿ ಅಥವಾ ಪಿ.ಯು.ಸಿ ತೆರ್ಗಡೆಯಾಗಿರಬೇಕು. (ಅಗತ್ಯವಿರುವ ತರಬೇತಿಗಳಿಗೆ ಮಾತ್ರ ಅನ್ವಯಿಸುತ್ತದೆ).
- ಈ ಮೊದಲು ತರಬೇತಿ ಕೋರಿದ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಇಲಾಖೆ ಮತ್ತು ಸಂಘ ಸಂಸ್ಥೆಗಳಿಂದ ಯಾವುದೆ ತರಬೇತಿ ಪಡೆದಿರದ ಬಗ್ಗೆ ಫಲಾನುಭವಿಗಳಿಂದ ರೂ. 100 ಮುಖಬೆಲೆಯ ಶಪಥ ಪತ್ರ.
- ಬ್ಯಾಂಕ ಖಾತೆ ಹೊಂದಿರುವ ದಾಖಲೆ ಸಲ್ಲಿಸುವುದು.
- ಆಧಾರ ಮತ್ತು ಮತದಾರರ ಗುರುತಿನ ಚೀಟಿ ದಾಖಲೆ ಸಲ್ಲಿಸುವುದು.
- ತರಬೇತಿಗೆ ಆಯ್ಕೆಯಾದ ತಕ್ಷಣ ಸಂಘವು ನಿರ್ಧರಿಸಿದಂತೆ ಆಯಾ ತರಬೇತಿವಾರು ಅಭ್ಯರ್ಥಿಯ ವತಿಯಿಂದ ಶೇ. 10-30% ತರಬೇತಿ ವೆಚ್ಚವನ್ನು ಭರಿಸಬೇಕು.
|
|
4 |
ಉಪಕರಣ ಪೂರೈಕೆ ಮತ್ತು ಮೌಲ್ಯವರ್ಧನೆಗಾಗಿ ಫಲಾನುಭವಿಗಳ ಅರ್ಹತೆ |
|
|
- ಪಿ.ಯು.ಸಿ ಅಥವಾ ಪದವಿ ತೆರ್ಗಡೆಯಾಗಿರಬೇಕು. (ಅಗತ್ಯವಿರುವ ತರಬೇತಿಗಳಿಗೆ ಮಾತ್ರ ಅನ್ವಯಿಸುತ್ತದೆ).
- ಈ ಮೊದಲು ಉಪಕರಣ ಪೂರೈಕೆ ಮತ್ತು ಉದ್ಯಮೆ ಮೌಲ್ಯವರ್ಧನೆಗಾಗಿ ಕೋರಿದ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಇಲಾಖೆ ಮತ್ತು ಸಂಘ ಸಂಸ್ಥೆಗಳಿಂದ ಯಾವುದೆ ಅನುದಾನ ಪಡೆದಿರದ ಬಗ್ಗೆ ಫಲಾನುಭವಿಗಳಿಂದ ರೂ. 100 ಮುಖಬೆಲೆಯ ಶಪಥ ಪತ್ರ.
- ಬ್ಯಾಂಕ ಖಾತೆ ಮತ್ತು ಪ್ಯಾನ್ ಕಾರ್ಡ ಹೊಂದಿರುವ ದಾಖಲೆ ಸಲ್ಲಿಸಬೇಕು.
- ಆಧಾರ ಮತ್ತು ಮತದಾರರ ಗುರುತಿನ ಚೀಟಿ ದಾಖಲೆ ಸಲ್ಲಿಸುವುದು.
- ತರಬೇತಿಗೆ ಆಯ್ಕೆಯಾದ ತಕ್ಷಣ ಸಂಘವು ನಿರ್ಧರಿಸಿದಂತೆ ಆಯಾ ತರಬೇತಿವಾರು ಅಭ್ಯರ್ಥಿಯ ವತಿಯಿಂದ ಶೇ. 10-30% ತರಬೇತಿ ವೆಚ್ಚವನ್ನು ಭರಿಸಬೇಕು.
- ಈಗಾಗಲೇ ಸಂಬಂಧಿತ ವಿಷಯದ ಉದ್ಯಮೆ ಚಾಲನೆಯಲ್ಲಿರುವ/ಉದ್ಯಮೆ ಪ್ರಾರಂಭಿಸುವ ಬಗ್ಗೆ ಸೂಕ್ತ ತರಬೇತಿ/ಅನುಭವ ಹೊಂದಿರುವ ದಾಖಲೆ ಸಲ್ಲಿಸುವುದು.
|
|
5 |
ಆಯ್ಕೆ ಮಾನದಂಡಗಳು |
|
|
- ತಾಲ್ಲೂಕು ಮಟ್ಟದ ಆಯ್ಕೆ ಸಮಿತಿಯಿಂದ ನಿಗದಿತ ಗುರಿ ಅನ್ವಯ ಅರ್ಹ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಗೆ ಸಲ್ಲಿಸುವುದು.
- ಜಿಲ್ಲಾ ಮಟ್ಟದ ಸಮಿತಿಯು ತಾಲೂಕುಗಳಿಂದ ಸ್ವೀಕೃತವಾದ ಆಯ್ಕೆಪಟ್ಟಿಯನ್ನು ಪರಿಶೀಲಿಸಿ, ಸರ್ಕಾರದ ನಿಯಮಾನುಸಾರ, ಸಾಮಾಜಿಕ ನ್ಯಾಯತತ್ವದಡಿ ಆಯ್ಕೆ ಮಾಡಿರುವುದನ್ನು ಪರಿಶೀಲಿಸಿ ಅಭ್ಯರ್ಥಿಗಳ ಪಟ್ಟಿಯನ್ನು, ಸಂಘದ ಕಛೇರಿಗೆ ಸಲ್ಲಿಸುವುದು.
- ಸಂಘದ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸಭೆ ನಿರ್ಧರಿಸಿದಂತೆ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸುವುದು.
|
|
6 |
ಮಾಹಿತಿ ಒದಗಿಸುವ ವಿದಾನ |
|
|
- ಪತ್ರಿಕಾ ಪ್ರಕಟಣೆ ಮುಖಾಂತರ ಸಂಘದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡುವುದು.
- ಆನಲೈನ ಮತ್ತು ಮೊಬೈಲ್ (ಂಠಿಠಿ) ಮುಖಾಂತರ ಅರ್ಜಿ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗುವುದು. ಅಂಚೆ ಮುಖಾಂತರವು ಅರ್ಜಿ ಸಲ್ಲಿಸಬಹುದು.
- ಸಂಘದಿಂದ ಆಯ್ಕೆ ಮಾಡಲಾದ ತರಬೇತಿ ಸಂಸ್ಥೆಗಳ ವಿವರ ಒಳಗೊಂಡಿರುವ ಯಾದಿಯಲ್ಲಿರುವ ಸಂಸ್ಥೆಗಳನ್ನು ಅನುಕ್ರಮವಾಗಿ ನಮೂದಿಸುವುದು.
- ಸಂಘದ ಆಯ್ಕೆ ಪಟ್ಟಿಯಲ್ಲಿರುವ ಸಂಸ್ಥೆಗಳನ್ನು/ಗುಣಮಟ್ಟದ ಉಪಕರಣಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಅಭ್ಯರ್ಥಿಗಳಿಗೆ ಒದಿಗಿಸುವುದು.
- ಸಂಘದ ಕಛೇರಿಯಲ್ಲಿ ಸ್ವೀಕೃತವಾದ ಅರ್ಜಿಗಳನ್ನು ತಾಲೂಕಾವಾರು ವಿಂಗಡಿಸಿ ತಾಲೂಕಾ ಮಟ್ಟದ ಆಯ್ಕೆ ಸಮಿತಿಗೆ ಕಳುಹಿಸಿ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆ ಹಂತದ ಮಾಹಿತಿಯನ್ನು ಸಂಘದ ವೆಬ್‍ಸೈಟ್‍ನಲ್ಲಿ ಅಪ್ಲೋಡ್ ಮಾಡುವುದು.
|
|