ಅಧ್ಯಾಯ-1

1. ಚಿಕ್ಕ ಹೆಸರು ಮತ್ತು ಪ್ರಾರಂಭ

 • ಈ ನಿಯಮಗಳನ್ನು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮುಲ, ಕೃಷಿ ಮತ್ತು ಸಾಂಸ್ಕøತಿಕ ಸಂಘದ ನಿಯಮಗಳು 2020 ಎಂದು ಕರೆಯತಕ್ಕದ್ದು.
 • ಸದರಿ ನಿಯಮಗಳು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಅನುಮೊದನೆಗೊಂಡು ರಾಜ್ಯ ಸರ್ಕಾರದಿಂದ ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ಪರಿಭಾಷೆಗಳು

 1. ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು:-
  • ಬೈಲಾ ಎಂದರೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸೃತಿಕ ಸಂಘದ ಬೈಲಾ 2020.
  • ಒಪ್ಪಂದ ಎಂದರ ಸಂಘದ ಪ್ರಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ಯಾವುದೇ ಅನುಮೋದಿತ ಏಜನ್ಸಿಗಳು, ವ್ಯಕ್ತಿ ಅಥವಾ ವ್ಯಕ್ತಿಯೊಂದಿಗೆ ಈ ಬೈಲಾದ ಉಪಬಂಧಗಳು ಮತ್ತು ಅದರಡಿಯಲ್ಲಿ ಉಪಬಂಧಿಸಿದ ನಿಯಮಗಳ ಮೇರೆಗೆ ಮಾಡಿಕೊಳ್ಳುವ ಒಪ್ಪಂದ.
  • ಲೆಕ್ಕ ಪರಿಶೋಧಕ ಎಂದರೆ ಬೈಲಾದ 20ನೇ ಉಪಬಂಧದ ಅನ್ವಯ ನೇಮಕಗೊಂಡಿರುವ ಒಬ್ಬ ಅಧಿಕಾರಿ.
  • ವಿಶೇಷ ಆಹ್ವಾನಿತರು ಎಂದರೆ ಬೈಲಾದ 8ನೇ ಉಪಬಂಧದಲ್ಲಿ ವಿವರಿಸಿದ ಹಾಗೂ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯಿಸಿದ ಅಧಿಕಾರಿಗಳು ಮತ್ತ ವ್ಯಕ್ತಿಗಳು.
  • ಆಡಳಿತ ಮಂಡಳಿ ಸದಸ್ಯರು ಎಂದರೆ ಸಂಘದ ಬೈಲಾದ 8ನೇ ಉಪಬಂಧದಲ್ಲಿ ವಿವರಿಸಿದಂತೆ ಅಧ್ಯಕ್ಷರಿಂದ ನೇಮಕಗೊಂಡ ವ್ಯಕ್ತಿಗಳು.
  • ತಾಂತ್ರಿಕ ಸಲಹೆಗಾರರು ಎಂದರೆ ಸಂಘದ ಬೈಲಾದ 10ನೇ ಉಪಬಂಧದಲ್ಲಿ ವಿವರಿಸಿದಂತೆ ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಣಯಿಸಿದ ಅಧಿಕಾರಿ.
  • ನಿಯಮಗಳು ಎಂದರೆ ಸಂಘದ ಬೈಲಾದ 18ನೇ ಉಪಬಂಧದಲ್ಲಿ ವಿವರಿಸಿದಂತೆ ರಚಿಸಲಾದ ನಿಯಮಗಳು.
  • ಸಂಘ ಎಂದರೆ ಕರ್ನಾಟಕ ಸರ್ಕಾರದ ಸಂಘಗಳ ನೋಂದಣಿ ಕಾಯ್ದೆ ಅಡಿ ನೊಂದಾಯಿಸಲಾದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ.
  • ವಹಿಗಳು ಎಂದರೆ ಸಂಘದ ಬೈಲಾದ 27ನೇ ಉಪಬಂಧದಲ್ಲಿ ವಿವರಿಸಿದಂತೆ ನಿರ್ವಹಿಸುವ ವಹಿಗಳು.
  • ಹಣಕಾಸು ವರ್ಷ ಅಥವಾ ವರ್ಷ ಎಂದರೆ ಸಂಘದ ಬೈಲಾದ ಉಪಬಂಧ 33 ರಲ್ಲಿ ವಿವರಿಸಿದಂತೆ ಪ್ರತಿ ವರ್ಷ ಏಪ್ರಿಲ್ 1ನೇ ದಿನಾಂಕದಿಂದ ಪ್ರಾರಂಭವಾಗಿ ಮಾರ್ಚ-31ನೇ ದಿನಾಂಕಕ್ಕೆ ಕೊನೆಗೊಳ್ಳುವ ಒಂದು ವರ್ಷದ ಅವಧಿ.
  • ನಿಧಿ ಎಂದರೆ ಸಂಘದ ಬೈಲಾದ ಉಪಬಂಧ 34 ರಲ್ಲಿ ವಿವರಿಸಿದಂತೆ ವಿವಿಧ ಮೂಲಗಳಿಂದ ಸ್ವೀಕೃತವಾಗುವ ಅನುದಾನ.
  • ನಮೂನೆ ಎಂದರೆ ಈ ನಿಯಮಗಳಿಗೆ ಅನುಬಂಧಿಸಲಾದ ನಮೂನೆಗಳು.
  • ಪ್ರಕರಣ ಎಂದರೆ ಬೈಲಾದ ಪ್ರಕರಣ.
 2. ಇದರಲ್ಲಿ ಉಪಯೋಗಿಸಿರುವ ಆದರೆ ಪರಿಭಾಷಿಸದೆ ಇರುವ ಎಲ್ಲಾ ಇತರ ಪದಗಳು ಮತ್ತು ಅಭಿವ್ಯಕ್ತಿಗಳು ಸಂಘದ ಬೈಲಾದಲ್ಲಿ ಅವುಗಳಿಗೆ ಅನುಕ್ರಮವಾಗಿ ನೀಡಿರುವ ಅರ್ಥವನ್ನೆ ಹೊಂದಿರತಕ್ಕದ್ದು.

ಅಧ್ಯಾಯ-2

3. ಅಧ್ಯಕ್ಷರ ಭತ್ಯೆಗಳು:

ಸಂಘದ ಅಧ್ಯಕ್ಷರಿಗೆ ಸಂದಾಯ ಮಾಡಬೇಕಾದ ಭತ್ಯೆಗಳು 1957 ರ ಕರ್ನಾಟಕ ಸಚಿವರ ವೇತನಗಳು ಮತ್ತು ಭತ್ಯೆಗಳ ಅಧಿನಿಯಮದ (1957ರ ಕರ್ನಾಟಕ ಅಧಿನಿಯಮ-5ರ) ಮೇರೆಗೆ ರಾಜ್ಯ ಸಚಿವರಿಗೆ ಸಂದಾಯ ಮಾಡುವ ಮೊತ್ತಕ್ಕೆ ಸರಿಸಮವಾಗಿರತಕ್ಕದ್ದು.

4. ಸದಸ್ಯರ ಭತ್ಯೆಗಳು:

ಸಂಘದ ಪ್ರತಿಯೊಬ್ಬ ಆಡಳಿತ ಮಂಡಳಿಯ ಸದಸ್ಯನು.
 • ಸಂಘದ ಸಭೆಗಳಿಗೆ ಹಾಜರಾಗುವುದಕ್ಕಾಗಿ ಆಗಿಂದಾಗೆ ಸರ್ಕಾರದ ಎ ಗುಂಪಿನ ಅಧಿಕಾರಿಗಳಿಗೆ ಅನುಮತಿಸಬಹುದಾದ ದರದಲ್ಲಿ ಪ್ರಯಾಣ ಭತ್ಯೆ ಮತ್ತು ದಿನಭತ್ಯೆಯನ್ನು ಹಾಗೂ
 • ಸಂಘಧ ಸಭೆಗಳಿಗೆ ಹಾಜರಾಗುವದಕ್ಕಾಗಿ ದಿನವೊಂದಕ್ಕೆ ರೂ.2000/- ದಿನಭತ್ಯೆಯನ್ನು ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು.

5. ಕಾರ್ಯದರ್ಶಿಯ ಅಧಿಕಾರಿಗಳು ಮತ್ತು ಪ್ರಕಾರಗಳು:

ಕಾರ್ಯದರ್ಶಿಯು ತತ್ಕಾಲದಲ್ಲಿ ಜಾರಿಯಲ್ಲಿರುವ ಸಂಘದ ಬೈಲಾ ಅಥವಾ ಯಾವುದೆ ಕಾನೂನಿನ ಮೇರೆಗೆ ತನಗೆ ಪ್ರದತ್ತವಾದ ಅಥವಾ ವಹಿಸಿಕೊಡಲಾದಂತಹ ಅಧಿಕಾರಗಳನ್ನು ಚಲಾಯಿಸುವದರ ಜೊತೆಗೆ ಮತ್ತು ಅಂತಹ ಕರ್ತವ್ಯಗಳನ್ನು ನಿರ್ವಹಿಸುವದರ ಜೊತೆಗೆ
 • ಸಂಘದ ಪ್ರತಿಯೊಂದು ಸಭೆಗೆ ಹಾಜರಾಗಲು ಮತ್ತು ವ್ಯವಹರಣೆಯಲ್ಲಿ ಭಾಗಿಯಾಗಲು ಹಕ್ಕು ಹೊಂದಿದ್ದು ಮತ ನಿಡುವದಕ್ಕೆ ಹಕು ಹೊಂದಿರುವದಿಲ್ಲ.
 • ಸಂಘಧ ಪ್ರತಿಯೊಂದು ಸಭೆಯ ವ್ಯವಹರಣೆಗಳ ನಡುವಳಿಕೆಯ ಸಂಕ್ಷಿಪ್ತ ದಾಖಲೆಯನ್ನು ದಾಖಲು ಮಾಡತಕ್ಕದ್ದು.
 • ಸಂಘದ ಸಭೆಯಲ್ಲಿ ಮಂಡಿಸಲಾದ ಅಥವಾ ಯಾವುದೆ ಗೊತ್ತುವಳಿ ಕುರಿತು ಅಥವಾ ಕೇಳಲಾದ ಪ್ರಶೆಗಳ ಸಂಬಂಧದಲ್ಲಿ ತಮ್ಮ ಅಭಿಪ್ರಾಯವನ್ನು ಮತ್ತು ಸ್ಪಷ್ಟಿಕರಣವನ್ನು ಒದಗಿಸತಕ್ಕದ್ದು.
 • ಆಡಳಿತ ಮಂಡಳಿ ಸಭೆಯ ಎಲ್ಲ ಗೊತ್ತುವಳಿಗಳು ಮತ್ತು ಆದೇಶಗಳನ್ನು ಜಾರಿಗೊಳಿಸತಕ್ಕದ್ದು. ಪರಂತು ಗೊತ್ತುವಳಿಗಳು ಅಥವಾ ಆದೇಶಗಳನ್ನು ಜಾರಿಗೆ ತರುವಲ್ಲಿ ತೊಂದರೆಗಳಿದ್ದಲ್ಲಿ ಅದನ್ನು ಆಡಳಿತ ಮಂಡಳಿಗೆ ಅದರ ಮುಂದಿನ ಸಭೆಯಲ್ಲಿ ವರದಿ ಮಾಡತಕ್ಕದ್ದು ಮತ್ತು ಆಡಳಿತ ಮಂಡಳಿಯ ನಿರ್ದೇಶನಗಳ ಅನುಸಾರವಾಗಿ ನಡೆಯತಕ್ಕದ್ದು.
 • ಸಂಘದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂಧಿಗಳ ಮೇಲೆ ಮೆಲ್ವಿಚಾರಣೆ ನಡೆಸತಕ್ಕದ್ದು ಮತ್ತು ನಿಯಂತ್ರಿಸತಕ್ಕದ್ದು.
 • ಸಂಘದ ಸಭೆಯ ವ್ಯವಹರಣೆಗಳಿಗೆ ಸಂಬಂಧಿಸಿದ ಎಲ್ಲ ಕಾಗದ ಪತ್ರಗಳು ಮತ್ತು ದಸ್ತಾವೇಜುಗಳು, ನಿರ್ವಹಿಸಿದ ಅಥವಾ ನಿರ್ವಹಣೆಯಲ್ಲರುವ ಯೋಜನೆಗಳು ಮತ್ತು ಕಾಮಗಾರಿಗಳ ಹಾಗೂ ಸಂಘದ ಅಧ್ಯಕ್ಷರು ನಿರ್ದೇಶನ ಮೇರೆಗೆ ಅಥವಾ ಸ್ವಂತ ಅಧಿಕಾರದ ಮೇರೆಗೆ ನಡೆಸಿದ ಪತ್ರ ವ್ಯವಹಾರಗಳು ಅಭಿರಕ್ಷಣೆಯನ್ನು ಹೊಂದಿರತಕ್ಕದ್ದು.
 • ಸಂಘದ ಯೋಜನೆಗಳನುಸಾರ ಕೈಗೊಂಡಿರುವ ಪ್ರತಿಯೊಂದು ಕಾಮಗಾರಿಯ ಮೇಲ್ವಿಚಾರಣೆ ಮಾಡತಕ್ಕದ್ದು. ಅಂತಹ ಕಾಮಗಾರಿಗಳ, ತರಬೇತಿಗಳ ನಿರ್ವಹಣೆಗಾಗಿ ಲೋಪ ಅಥವಾ ಪ್ರಗತಿಯು ನಿಧಾನವಾಗಿರುವ ಸಂದರ್ಭದಲ್ಲಿ ಅಧ್ಯಕ್ಷರಿಗೆ ಹಾಗೂ ಆಡಳಿತ ಮಂಡಳಿಗೆ ವರದಿ ಮಾಡತಕ್ಕದ್ದು.
 • ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ನಿರ್ಧರಿಸಿದಂತೆ ರಾಜ್ಯ ಸರ್ಕಾರದ ಅಥವಾ ಸರ್ಕಾರೇತರ ಖ್ಯಾತ ತಜ್ಞರು ಅಥವಾ ಸಮಾಲೋಚಕರ (ಸಲಹೆಗಾರರ) ನೆರವಿನೊಂದಿಗೆ ಸಂಘವು ಸೂಕ್ತವೆಂದು ಪರಿಗಣಿಸಬಹುದಾದ ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ಭಾಗದ ಅಭಿವೃದ್ಧಿಗಾಗಿ ವಿಶೇಷ ಅಧ್ಯಯನ ಮತ್ತು ಸಮೀಕ್ಷೆ ನಡೆಸುವುದು ಮತ್ತು ಅದರ ಮೇಲಿನ ವರದಿಯನ್ನು ತನ್ನ ಟಿಪ್ಪಣಿಗಳೊಂದಿಗೆ ಆಡಳಿತ ಮಂಡಳಿಯ ಪರಿಗಣನೆಗಾಗಿ ಇಡತಕ್ಕದ್ದು.
 • ಅದೆ ತರಹ ತಜ್ಞರ ಅಥವಾ ಸಮಾಲೊಚಕರ ನೆರವಿನೊಂದಿಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪೂರ್ಣಗೊಂಡಿರುವ ಅಥವಾ ಕಾರ್ಯರೂಪಕ್ಕೆ ತರಬೇಕೆಂದಿರುವ ಯಾವುದೆ ನಿರ್ಧಿಷ್ಟ ಯೋಜನೆಯ ವಿಶೇಷ ಮೌಲ್ಯ ನಿರ್ಣಯ ಅಥವಾ ಲೆಕ್ಕ ಪರಿಶೋಧನೆಯನ್ನು ಕೈಗೊಂಡು ಅದರ ಮೇಲಿನ ವರದಿಗಳನ್ನು ತನ್ನ ಟಿಪ್ಪಣಿಗಳೊಂದಿಗೆ ಆಡಳಿತ ಮಂಡಳಿಯ ಪರಿಗಣನೆಗಾಗಿ ಇಡತಕ್ಕದ್ದು.
 • ಲೆಕ್ಕ ಪರಿಶೋಧಕನು ಸೂಚಿಸುವ ನ್ಯೂನ್ಯತೆಗಳನ್ನು ಸರಿಪಡಿಸಲು ತ್ವರಿತವಾಗಿ ಕ್ರಮವನ್ನು ಕೈಗೊಳ್ಳತಕ್ಕದ್ದು.
 • ಸಂಘದ ಬೈಲಾ ಅಥವಾ ಅದರ ಮೇರೆಗೆ ಅವರಿಗೆ ಪ್ರತ್ಯಾಯೊಜಿಸಬಹುದಾದ ಯಾವುದೇ ಪ್ರತ್ಯೇಕ ಅಥವಾ ವಿಶೇಷ ಅಧಿಕಾರಗಳೊಂದಿಗೆ ಆಗಿಂದಾಗೆ ತಿದ್ದುಪಡಿಯಾದಂತಹ ಹಣಕಾಸಿನ ಅಧಿಕಾರಿಗಳ (ಎಲ್ಲಾ ಇಲಾಖೆಗಳಿಗೂ ಸಾಮಾನ್ಯವಾಗಿರುವ) ಕೈಪಿಡಿಯಲ್ಲಿ ನಿರ್ಧಿಷ್ಠಪಡಿಸಲಾದ ಇಲಾಖೆಯ ಪ್ರಧಾನ ಮುಖ್ಯಸ್ಥನ ಎಲ್ಲಾ ಅಧಿಕಾರಗಳನ್ನು ಚಲಾಯಿಸತಕ್ಕದ್ದು.
 • ಸ್ವತಃ ತಾನೆ ಆಗಲಿ ಅಥವಾ ಆಧಿನ ಅಧಿಕಾರಿಗಳ ಮೂಲಕವಾಗಲಿ ಕಾಮಗಾರಿಗಳು ಮತ್ತು ಸರಬರಾಜುಗಳೂ ಸೇರಿದಂತೆ ಸಂಘದ ಎಲ್ಲಾ ಯೋಜನೆಗಳನ್ನು ಪರಿಶೀಲಿಸತಕ್ಕದ್ದು.
 • ಅದೆ ರೀತಿಯ ಉದ್ದೇಶಕ್ಕಾಗಿ ಅದೆ ರೀತಿಯ ಕರಾರನ್ನು ಸಂಬಂಧಪಟ್ಟ ಅಭಿವೃದ್ಧಿ ಇಲಾಖೆಯಿಂದ ಉಪಯೋಗಿಸುವಂತಹ ವಿಧಾನವನ್ನು ಮತ್ತು ಅಂತಹ ನಮೂನೆಯಲ್ಲಿ ಒಪ್ಪಂದವನ್ನು ಮಾಡಿಕೊಳ್ಳಲು ಅಧಿಕಾರಿ ಹೊಂದಿರತಕ್ಕದ್ದು. ಪರಂತು ರೂ. 2.00 ಕೋಟಿಗಳಿಗೆ ಹೆಚ್ಚಾಗಿರುವ ವೆಚ್ಚವನ್ನು ಒಳಗೊಂಡಿರುವ ಯಾವುದೆ ಒಪ್ಪಂದವನ್ನು ರಾಜ್ಯ ಸರ್ಕಾರದ ಪೂರ್ವ ಮಂಜೂರಾತಿ ಇಲ್ಲದೆ ಮಾಡಕೊಳ್ಳತಕ್ಕದ್ದಲ್ಲ.
 • ಏಕಕಾಲದಲ್ಲಿ ರೂ. 25.00 ಲಕ್ಷಗಳಿಗೆ ಮೀರದ ವೆಚ್ಚವನ್ನು ಭರಿಸುವ ಅಧಿಕಾರವಿರತಕ್ಕದ್ದು.
 • ಸರ್ಕಾರದಿಂದ ಇಲಾಖಾ ಮುಖ್ಯಸ್ಥರಿಗೆ ನಿಗದಿಪಡಿಸಿರುವಂತೆ ಪ್ರಯಾಣಭತ್ಯೆ, ವಾಹನ ಸೌಲಭ್ಯ ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಅಧಿಕಾರವಿರತಕ್ಕದ್ದು.
 • ಸಂಘದ ಕಛೇರಿಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂಧಿಯವರಿಗೆ ಸರ್ಕಾರದಿಂದ ತತ್ಸಮಾನ ಹುದ್ದೆಗಳಿಗೆ ನಿಗದಿಪಡಿಸಿರುವಂತೆ ಪ್ರಯಾಣಭತ್ಯೆ, ವಾಹನಸೌಲಭ್ಯ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡಲು ಅಧಿಕಾರ ಹೊಂದಿರತಕ್ಕದ್ದು.
 • ಸಂಘದ ಬೈಲಾ ಉಪಬಂಧ 10, 20 ಮತ್ತು 22 ರ ಅನ್ವಯ ಸಂಘದ ಅನುದಾನಗಳ ನಿರ್ವಹಣೆಗಾಗಿ ಆಡಳಿತ ಮಂಡಳಿಯು ನಿರ್ಧರಿಸದಂತೆ ರಾಷ್ಟ್ರೀಕೃತ ಬ್ಯಾಂಕನಲ್ಲಿ ವಿವಿಧ ಖಾತೆಗಳನ್ನು ತೆರೆಯುವ ಅಧಿಕಾರ ಹೊಂದಿರತಕ್ಕದ್ದು.
 • ಸಂಘದ ಯೋಜನೆಗಳ ಅನುಷ್ಠಾನಕ್ಕಾಗಿ ತಾತ್ಕಾಲಿಕ ಅವಧಿಗೆ ಅಗತ್ಯವಿರುವ ಸಿಬ್ಬಂಧಿಗಳನ್ನು ಆಡಳಿತ ಮಂಡಳಿಯು ನಿರ್ಣಯಿಸಿದಂತೆ ಹೊರಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳುವ ಅಧಿಕಾರ ಹೊಂದಿರತಕ್ಕದ್ದು.
 • ಸಂಘದ ಬೈಲಾ ಉಪಬಂಧ 38 ರ ಅನ್ವಯ ಸಂಘದ ಕಾರ್ಯಪ್ರಕ್ರಿಯೆಯ ಕಾನೂನು ವ್ಯಾಜ್ಯಗಳನ್ನು ನಿರ್ವಹಿಸಲು ಆಡಳಿತ ಮಂಡಳಿಯು ನಿರ್ಣಯಿಸಿದಂತೆ ಕಾನೂನು ಸಲಹೆಗಾರರನ್ನು ನೇಮಿಸಿಕೊಳ್ಳಲು ಅಧಿಕಾರ ಹೊಂದಿರತಕ್ಕದ್ದು.
 • ಸಂಘದ ಆಡಳಿತ ಮಂಡಳಿ ನಿರ್ಣಯಿಸಿದಂತೆ ಸಂಘದ ಯೋಜನೆಗಳ ಕಾರ್ಯಚಟುವಟಿಕೆಗಳ ವಿವರಗಳನ್ನು ಪತ್ರಿಗಳು, ಆಕಾಶವಾಣಿ, ಚಂದನ ದೂರದರ್ಶನ ವಾಹಿನಿ, ಸಾಮಾಜಿಕ ಜಾಲತಾಣ, ಸಂಘದ ವೆಬ್‍ಸೈಟ್ ಮತ್ತು ಮೊಬೈಲ್‍ಗಳಲ್ಲಿ ಪ್ರಕಟಿಸಲು ಅಧಿಕಾರ ಹೊಂದಿರತಕ್ಕದ್ದು.

6. ಸಂಘದ ಸಮಿತಿಗಳು:

 • ಸಂಘದ ಬೈಲಾ ಉಪಬಂಧ-18ರನ್ವಯ ಸಂಘದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿವಿಧ ಸಮಿತಿಗಳನ್ನು ರಚಿಸಬಹುದು.
 • ಸಂಘದ ಬೈಲಾ ಉಪಬಂಧ-18 ರನ್ವಯ ಸಂಘದ ಉದ್ದೇಶ ಈಡೆರಿಕೆಗಾಗಿ ರಚಿಸಲಾಗುವ ವಿವಿಧ ಸಮಿತಿಗಳ ಸದಸ್ಯರುಗಳು ಆಡಳಿತ ಮಂಡಳಿಯು ಕಾಲಕಾಲಕ್ಕೆ ನಿಗದಿ ಪಡಿಸುವ ದರದಲ್ಲಿ ಹಾಗೂ ಸರ್ಕಾರಿ ನಿಯಮಾವಳಿಗಳಂತೆ ಪ್ರಯಾಣ ಮತ್ತು ದಿನಭತ್ಯೆಯನ್ನು ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು.
 • ಸಮಿತಿಯ ಸಭೆಗಳಿಗೆ ಹಾಜರಾಗುವದಕ್ಕೆ ದಿನವೊಂದಕ್ಕೆ ರೂ.1000 ದಿಂದ 10,000ಗಳವರೆಗೆ ಆಡಳಿತ ಮಂಡಳಿಯು ಆಯಾ ಸಮಿತಿವಾರು ನಿಗದಿ ಪಡಿಸಿದ ದರದಲ್ಲಿ ಹಾಗೂ ಸರ್ಕಾರಿ ನಿಯಮಾವಳಿಗಳಂತೆ ಸಭಾ ಭತ್ಯೆ ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು.

7. ಲೆಕ್ಕಪರಿಶೋಧಕರು:

 • ಸಂಘದ ಬೈಲಾ ಉಪಬಂಧ 20 ರ ಅನ್ವಯ ನೇಮಿಸಲಾದ ಚಾರ್ಟೆಡ್ ಅಕೌಂಟೆಂಟ್‍ರವರು ಸಂಘದ ಆಡಳಿತ ಮಂಡಳಿಯು ನಿಗದಿ ಪಡಿಸಿದ ದರದಲ್ಲಿ ಗೌರವಧನ ಪಡೆದುಕೊಳ್ಳಲು ಹಕ್ಕುಳ್ಳವರಾಗಿರತಕ್ಕದ್ದು.
 • ಸಂಘದ ಬೈಲಾ ಉಪಬಂಧ 35 ರ ಅನ್ವಯ ಲೆಕ್ಕ ಪರಿಶೋಧನಾ ವರದಿಯನ್ನು ಕಾರ್ಯದರ್ಶಿಗಳ ಮುಖಾಂತರ ಸಲ್ಲಿಸುವುದು.

ಅಧ್ಯಾಯ-3
ಸಂಘದ ಯೋಜನೆ ಮತ್ತು ಆಯವ್ಯಯ ಅಂದಾಜು

8. ಯೋಜನೆ ತಯ್ಯಾರಿಕೆ:

 • ಪ್ರತಿಯೊಂದು ವರ್ಷದ ಡಿಸ್ಸೆಂಬರ-31ನೇ ದಿನಾಂಕಕ್ಕೆ ಮೊದಲು ಅಥವಾ ಸರ್ಕಾರವು ನಿಗದಿ ಪಡಿಸಿದ ಅವಧಿ ಒಳಗಾಗಿ ಸಂಘವು ಆಡಳಿತ ಮಂಡಳಿ ಸಭೆಯಲ್ಲಿ ಅನುಮೊದಿಸಿದ ನಮೂನೆಗಳಲ್ಲಿ ಹಣಕಾಸು ಆಯವ್ಯಯ ಪತ್ರ ಮತ್ತು ವಾರ್ಷಿಕ ಯೋಜನೆಯನ್ನು ಸಿದ್ಧಪಡಿಸಿ ಅನುಮೊದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸತಕ್ಕದ್ದು.
 • ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂಧಿ ವರ್ಗದ ವಾರ್ಷಿದ ವೆಚ್ಚದ ವಿವರ ಮತ್ತು ಮುಂದಿನ ವರ್ಷದಲ್ಲಿ ಅಗತ್ಯವಿರಬಹುದಾದ ಹುದ್ದೆಗಳು ಮತ್ತು ಸದರಿ ಹುದ್ದೆಗಳ ನಿರ್ವಹಣೆಗೆ ತಗಲಬಹುದಾದ ವೆಚ್ಚಗಳ ವಿವರಗಳನ್ನು ಯೋಜನೆಯಲ್ಲಿ ಅಳವಡಿಸತಕ್ಕದ್ದು.
 • ಸಂಘವು ಮುಂದಿನ ಹಣಕಾಸು ವರ್ಷದಲ್ಲಿ ಭಾಗಶಃ ಅಥವಾ ಪೂರ್ಣವಾಗಿ ಹಣ ಒದಗಿಸಲು ಪ್ರಸ್ತಾಪಿಸಲಾಗಿರುವ ಯೋಜನೆಗಳ ಸಂಪೂರ್ಣ ವಿವರ ಮತ್ತು ತಗಲುವ ಹಣಕಾಸಿನ ವೆಚ್ಚದ ವಿವರಗಳನ್ನು ಯೋಜನೆಯಲ್ಲಿ ಅಳವಡಿಸತಕ್ಕದ್ದು.
 • ರಾಜ್ಯ ಸರ್ಕಾರವು ಅಗತ್ಯಪಡಿಸಬಹುದಾದಂತಹ ಇತರ ವಿವರಣೆಗಳನ್ನು ಯೋಜನೆಯಲ್ಲಿ ಉಲ್ಲೇಖಿಸತಕ್ಕದ್ದು.

9. ಆಯವ್ಯಯಗಳ ತಯ್ಯಾರಿಕೆ:

 • ಪ್ರಸಕ್ತ ವರ್ಷದಲ್ಲಿ ಸರ್ಕಾರದಿಂದ ಬಂದ ಅನುದಾನಗಳು, ವಿವಿಧ ಮೂಲಗಳಿಂದ ಬಂದ ದೇಣಿಗೆ ಮತ್ತು ವರಮಾನಗಳ ವಿವರಗಳನ್ನು ಒಳಗೊಂಡಿರುವ ಮತ್ತು ಸಂಘದ ವಿವಿಧ ಯೋಜನೆಗಳಿಗಾಗಿ ವೆಚ್ಚ ಮಾಡಿದ ವಿವರವಾದ ವರದಿಯನ್ನು ಹಾಗೂ ಪ್ರಸಕ್ತ ಸಾಲಿನಲ್ಲಿ ವೆಚ್ಚ ಮಾಡಲು ಬಾಕಿ ಉಳಿದ ಅನುದಾನದ ವಿವರಗಳನ್ನು ಒಳಗೊಂಡಿರುವ ವರದಿಯನ್ನು ತಯ್ಯಾರಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸತಕ್ಕದ್ದು.
 • ಕಾರ್ಯರೂಪದಲ್ಲಿರುವ ಅಥವಾ ಕಾರ್ಯರೂಪಕ್ಕೆ ತರಬೆಕೆಂದು ಉದ್ದೇಶಿಸಿರುವ ಯೋಜನೆಗಲ ಮೇಲಿನ ವೆಚ್ಚಗಳು, ಸಮಿತಿಯ ವೆಚ್ಚಗಳು, ಸಿಬ್ಬಂಧಿವರ್ಗ ಮತ್ತು ಅಧಿಕಾರಿಗಳು ಹಾಗೂ ಇತರೆ ವೇತನ ಭತ್ಯೆಗಳು, ಸಾಧಿಲ್ವಾರು ವೆಚ್ಚ ಮೋಟಾರು ವಾಹನ ಸೇರಿದಂತೆ ಉಪಕರಣಗಳು ಮತ್ತು ಯಂತ್ರಗಳ ವೆಚ್ಚಗಳು ಹಾಗೂ ಕಛೇರಿ ವೆಚ್ಚಗಳ ವಿವರಗಳನ್ನು ಒಳಗೊಂಡಿರತಕ್ಕದ್ದು.
 • ರಾಜ್ಯ ಸರ್ಕಾರವು ಅಗತ್ಯಪಡಿಸಬಹುದಾದಂತಹ ಇತರೆ ವಿವರಣೆಗಳು ಇರತಕ್ಕದ್ದು.

10.

ರಾಜ್ಯ ಸರ್ಕಾರವು ತಾನು ಸೂಕ್ತವೆಂದು ಭಾವಿಸಬಹುದಾದಂತಹ ಮಾರ್ಪಾಟುಗಳೊಂದಿಗೆ ತನಗೆ ಕಳುಹಿಸಲಾದ ವಾರ್ಷಿಕ ಯೋಜನೆ ಆಯವ್ಯಯ ಪತ್ರ ಮತ್ತು ಸಿಬ್ಬಂಧಿ ವರ್ಗದ ಪಟ್ಟಿಯನ್ನು ಮಂಜೂರು ಮಾಡಬಹುದು.

11. ಪೂರಕ ಯೋಜನೆ ಮತ್ತು ಆಯವ್ಯಯ ಪತ್ರ:

 • ಸಂಘವು ಸರ್ಕಾರಕ್ಕೆ ಸಲ್ಲಿಸಿದ ವಾರ್ಷಿಕ ಯೋಜನೆಯ ಸಂಬಂಧದಲ್ಲಿ ವರ್ಷದ ಯಾವುದೇ ಕಾಲದಲ್ಲಿ ಪೂರಕ ಯೋಜನೆ ಮತ್ತು ಆಯವ್ಯಯ ಪತ್ರ ಮತ್ತು ಹೆಚ್ಚಿನ ಸಿಬ್ಬಂಧಿವರ್ಗದ ಅವಶ್ಯಕತೆ ಯಾವುದಾದರೂ ಇದ್ದರೆ ಅದನ್ನು ರಾಜ್ಯ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಬಹುದು.
 • ಸಂಘವು ಸಂಬಂಧಪಟ್ಟ ವಿಷಯಗಳ ತಜ್ಞರೊಂದಿಗೆ ಅಥವಾ ಸರ್ಕಾರದ ಇಲಾಖೆಗಳು ಮತ್ತು ಕಾರ್ಯನಿರ್ವಾಹಕ ಏಜನ್ಸಿಗಳೊಂದಿಗೆ ಸಮಾಲೋಚಿಸಿ ಯಾವುದೇ ಕಾಲದಲ್ಲಿ ಸರ್ಕಾರದಿಂದ ಮಂಜೂರಾಗಿರುವ ಯೋಜನೆಯಲ್ಲಿ ಸೇರಿರುವ ಯಾವುದೇ ಪರಿಯೋಜನೆ ಅಥವಾ ಅದರ ಯಾವುದೇ ಭಾಗವನ್ನು ಮಾರ್ಪಾಡು ಮಾಡಬಹುದಾಗಿದೆ. ಪರಂತು ಈ ರೀತಿ ಮಾರ್ಪಾಡು ಮಾಡಿದ ಯೋಜನೆಯ ಕಾರ್ಯಾಚರಣೆಗಾಗಿ ಮೂಲತಃ ಮಂಜೂರಾಗಿದ್ದ ಮೊಬಲಗಿನ ಶೇ. 25% ಕ್ಕಿಂತ ಹೆಚ್ಚುವೆಚ್ಚ ಒಳಗೊಂಡಿದ್ದರೆ ಅಥವಾ ಯಾವುದೇ ಅನುಮೋದಿತ ಯೋಜನೆಯ ಮೂಲವ್ಯಾಪ್ತಿ ಮತ್ತು ಉದ್ದೇಶಕ್ಕೆ ಹೊರತಾಗಿದ್ದರೆ ಅಂತಹ ಬದಲಾವಣೆಯನ್ನು ಸರ್ಕಾರದ ಪೂರ್ವ ಮಂಜೂರಾತಿ ಇಲ್ಲದೆ ಮಾಡತಕ್ಕದ್ದಲ್ಲ.
 • ಸಂಘವು ವಾರ್ಷಿಕ ಯೋಜನೆ ಅಥವಾ ಪೂರ್ವ ಯೋಜನೆಯಲ್ಲಿ ಸೇರಿಸದ ಹೊರತು ಯಾವುದೇ ಯೋಜನೆಯನ್ನು ಕಾರ್ಯರೂಪಕ್ಕೆ ತರತಕ್ಕದ್ದಲ್ಲ.
 • ಸಂಘವು ಯೋಜನೆಯ ಅನುಸಾರವಾಗಿ ತಾನು ಅನುಮೋದಿಸಿದ ಯಾವುದೇ ಪರಿಯೋಜನೆ ಅಥವಾ ಸ್ಕೀಮ್ ಕಾರ್ಯರೂಪಕ್ಕೆ ತರಲು ಸ್ವತಃ ಭಾಗಿಯಾಗುವಂತಿಲ್ಲ. ಎಲ್ಲಾ ಅನುಮೋದಿತ ಯೋಜನೆಗಳನ್ನು ನಿಗದಿತ ಅರ್ಹತೆ ಹೊಂದಿದ ಸಂಸ್ಥೆಗಳಿಂದ, ಟ್ರಸ್ಟಗಳಿಂದ, ವಿಶ್ವವಿದ್ಯಾಲಯಗಳು ಮತ್ತು ಸರ್ಕಾರದ ಸಂಬಂಧಿತ ಇಲಾಖೆಗಳ ಮುಖಾಂತರ ಕಾರ್ಯರೂಪಕ್ಕೆ ತರಲು ಕ್ರಮವಹಿಸತಕ್ಕದ್ದು.
 • ಸಂಘವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ನಿಗದಿಪಡಿಸಲಾದ ಸಂಸ್ಥೆಗಳು, ಟ್ರಸ್ಟಗಳು ಮತ್ತು ಸರ್ಕಾರದ ಸಂಬಂಧಿತ ಇಲಾಖೆಗಳು ಅವುಗಳಿಗೆ ವಹಿಸಿದ ಜವಾಬ್ದಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದೆ ಇದ್ದಲ್ಲಿ ಸಂಘವು ನಿಯಮಿಸಬಹುದಾದ ಅಂತಹ ನಿಯಮಗಳಿಗೆ ಒಳಪಟ್ಟು ಬೆರೆ ಸಂಸ್ಥೆ, ಟ್ರಸ್ಟ ಮತ್ತು ಸರ್ಕಾರದ ಇತರ ಇಲಾಖೆಗಳಿಗೆ ಯೋಜನೆ ಪೂರ್ಣಗೊಳಿಸುವ ಜವಾಬ್ದಾರಿ ವಹಿಸಲು ಕ್ರಮ ಜರುಗಿಸತಕ್ಕದ್ದು.
 • ಸಂಘವು ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅವಶ್ಯಕವಿರುವ ಮಾಹಿತಿಯನ್ನು ಕಲ್ಯಾಣ ಕರ್ನಾಟಕ ವಿಭಾಗದ ಯಾವುದೆ ಇಲಾಖೆಯ ಅಧಿಕಾರಿಗಳಿಂದ ಮಾಹಿತಿಯನ್ನು ಕೋರಿ ಪಡೆಯಬಹುದು ಮತ್ತು ಸಂಘವು ಕೋರಿದ ಮಾಹಿತಿಯನ್ನು ಒದಗಿಸಲು ಸಂಬಂಧಿತ ಇಲಾಖೆಯ ಅಧಿಕಾರಿಯು ಬದ್ಧರಾಗಿರತಕ್ಕದ್ದು.

12. ಲೆಕ್ಕಪತ್ರಗಳು ಮತ್ತು ಆಯವ್ಯಯ ಪತ್ರದ ಮಂಡನೆ:

 • ಕಾರ್ಯದರ್ಶಿಯವರು ಮುಂದೆ ಬರುವ ಏಪ್ರೀಲ್-1 ದಿನಾಂಕದಂದು ಪ್ರಾರಂಭಗೊಳ್ಳುವ ಹಣಕಾಸು ವರ್ಷದ ನಿರಿಕ್ಷಿತ ಸ್ವೀಕೃತಿಗಳು ಮತ್ತು ವೆಚ್ಚಗಳ ಒಂದು ಆಯವ್ಯಯ ಅಂದಾಜಿನೊಂದಿಗೆ ಮುಂದೆ ಬರುವ ಹಣಕಾಸು ವರ್ಷದ ಮಾರ್ಚ-31ನೇ ದಿನಾಂಕದಂದು ಕೊನೆಗೊಳ್ಳುವ ಹಣಕಾಸು ವರ್ಷದ ವಾಸ್ತವಿಕ ಮತ್ತು ನಿರೀಕ್ಷಿತ ಸ್ವೀಕೃತಿಗಳು ಮತ್ತು ವೆಚ್ಚದ ಒಂದು ಪೂರ್ಣ ಲೆಕ್ಕ ಪತ್ರವನ್ನು ತಯ್ಯಾರಿಸಿ ಡಿಸ್ಸೆಂಬರ-1 ರಿಂದ 15ನೇ ದಿನಾಂಕದ ನಡುವೆ ನಡೆಯುವ ಆಡಳಿತ ಮಂಡಳಿಯ ಸಭೆಯಮುಂದೆ ಇಡಲು ಕ್ರಮವಹಿಸತಕ್ಕದ್ದು.
 • ನಂತರ ಸಂಘವು ಮುಂಬರುವ ಹಣಕಾಸು ವರ್ಷದ ಆಯವ್ಯಯದಲ್ಲಿ ಒಳಗೊಂಡಿರುವ ಧನ ವಿನಿಯೋಗಗಳನ್ನು ಮತ್ತು ಮಾರ್ಗೊಪಾಯಗಳನ್ನು ನಿರ್ಧರಿಸಿ ಆಡಳಿತ ಮಂಡಳಿಯ ಸಭೆಯಲ್ಲಿ ಅಂಗಿಕರಿಸದಂತೆ ಆಯವ್ಯಯವನ್ನು ಸರ್ಕಾರವು ನಿಗದಿಪಡಿಸಿರಬಹುದಾದಂತಹ ದಿನಾಂಕಕ್ಕೆ ಮುಂಚಿತವಾಗಿ ಸರ್ಕಾರಕ್ಕೆ ಕಳುಹಿಸತಕ್ಕದ್ದು.
 • ಸರ್ಕಾರದಿಂದ ನಿಗದಿತ ದಿನಾಂಕದಂದು ಅಥವಾ ಅದಕ್ಕೆ ಮುಂಚೆ ಆಡಳಿತ ಮಂಡಳಿಯು ಆಯವ್ಯಯ ಅಂದಾಜನ್ನು ಅನುಮೋದಿಸಲು ತಪ್ಪಿದರೆ ಕಾರ್ಯದರ್ಶಿಯವರು ಆಯವ್ಯಯ ಅಂದಾಜನ್ನು ಸರ್ಕಾರಕ್ಕೆ ಕಳುಹಿಸತಕ್ಕದ್ದು ಮತ್ತು ಸರ್ಕಾರವು ಅದನ್ನು ಮಾರ್ಪಾಟುಗಳೊಂದಿಗೆ ಅಥವಾ ಮಾರ್ಪಾಟುಗಳಿಲ್ಲದೆ ಅನುಮೋದಿಸತಕ್ಕದ್ದು.
 • ಸರ್ಕಾರದಿಂದ ಹಾಗೆ ಅನುಮೋದಿತವಾದ ಸಂಘದ ಆಯವ್ಯಯವನ್ನು ಸರ್ಕಾರವು ಪ್ರಮಾಣಿಕರಿಸತಕ್ಕದ್ದು ಮತ್ತು ಅನಂತರ ಸಂಘವು ಸದರಿ ಆಯವ್ಯಯವನ್ನು ಯುಕ್ತವಾಗಿ ಅನುಮೋದಿಸಿದೆ ಎಂದು ಭಾವಿಸತಕ್ಕದ್ದು.

13. ಲೆಕ್ಕಪತ್ರಗಳ ನಿರ್ವಹಣೆ ಮತ್ತು ವೆಚ್ಚಗಳು ನಿರ್ಬಂಧಗಳು:

 • ವಾರ್ಷಿಕ ಲೆಕ್ಕಗಳು ಸೇರಿದಂತೆ ಸಂಘದ ಆದಾಯ ಮತ್ತು ವೆಚ್ಚಗಳ ಲೆಕ್ಕಪತ್ರಗಳನ್ನು ಸರ್ಕಾರವು ನೀಡುವ ಯಾವುದೇ ನಿರ್ದೇಶನಕ್ಕೆ ಒಳಪಟ್ಟು ಕಾರ್ಯದರ್ಶಿಯವರ ಸಲಹೆಯ ಮೇರೆಗೆ ನಿವೃತ್ತ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧೀಕ್ಷಕ ವೃಂದದ ಸಿಬ್ಬಂಧಿಯ ಮುಖಾಂತರ ಆಡಳಿತ ಮಂಡಳಿಯ ಸಭೆಯು ಅನುಮೋದಿಸಿದ ನಮೂನೆಗಳಲ್ಲಿ ನಿರ್ವಹಿಸತಕ್ಕದ್ದು.
 • ಸಂಘದ ನಿಧಿಯಿಂದ ವೆಚ್ಚವನ್ನು ಈ ನಿಯಮಗಳ ಮೇರೆಗೆ ನೇಮಿಸಲಾದ ಮಂಜೂರಾತಿಗಳು, ಷರತ್ತುಗಳು ಮತ್ತು ಪರಿಮಿತಿಗಳಿಗೆ ಒಳಪಟ್ಟು ನಿರ್ವಹಿಸತಕ್ಕದ್ದು.
 • ಸಂಘವು ಹಣಕಾಸು ವರ್ಷದ ಮುಕ್ತಾಯದ ನಂತರ ನಡೆಯುವ ಮೊದಲನೆ ಸಾಮಾನ್ಯ ಸಭೆಯಲ್ಲಿ ಆ ವರ್ಷದ ಲೆಕ್ಕ ಪತ್ರಗಳನ್ನು ಅಂಗೀಕರಿಸತಕ್ಕದ್ದು. ಆಡಳಿತ ಮಂಡಳಿ ಸಭೆಯಲ್ಲಿ ನಿಗದಿಪಡಿಸಲಾದ ನಮೂನೆಯಲ್ಲಿ ವರದಿಯನ್ನು ತಯ್ಯಾರಿಸಿ ಅಂಗಿಕರಿಸತಕ್ಕದ್ದು.

14. ಲೆಕ್ಕಗಳ ರವಾನೆ:

ಸಂಘವು ತಾನು ಅಂತಿಮವಾಗಿ ವಾರ್ಷಿಕ ಲೆಕ್ಕಪತ್ರಗಳನ್ನು ಅಂಗೀಕರಿಸಿದ ಕೂಡಲೆ ವಾರ್ಷಿಕ ಲೆಕ್ಕಗಳನ್ನು ಸರ್ಕಾರಕ್ಕೆ ರವಾನಿಸತಕ್ಕದ್ದು ಮತ್ತು ರಾಜ್ಯ ಸರ್ಕಾರವು ಆಗಿಂದಾಗ್ಗೆ ನಿರ್ದೇಶಿಸಬಹುದಾದಂತೆ ಅದಕ್ಕೆ ಸಂಬಂಧಿಸಿದ ವಿವರಗಳನ್ನು ಒದಗಿಸತಕ್ಕದ್ದು.

ಅಧ್ಯಾಯ-4

15. ಲೆಕ್ಕಪತ್ರಗಳ ಕಾರ್ಯವೈಖರಿ:

 • ಸಂಘದಿಂದ ಕೈಗೊಳ್ಳಲಾಗಿರುವ ಯೋಜನೆಗಳು ಮತ್ತು ಕಾಮಗಾರಿಗಳ ಸಂಬಂಧದಲ್ಲಿನ ಯಾವುದೇ ಕ್ಲೇಮಿಗೆ ಸಂಬಂಧಿಸಿದ ಬಿಲ್ಲುಗಳನ್ನು ಸದರಿ ಯೋಜನೆ ಅಥವಾ ಕಾಮಗಾರಿಯ ಮೇಲ್ವಿಚಾರಣೆಗೆ ನಿಯೋಜಿಸಲಾದ ಸಮಿತಿ ಅಥವಾ ತಾಂತ್ರಿಕೆ ಇಲಾಖೆಯಿಂದ ಪ್ರಮಾಣಿಕರಿಸಿದ ನಂತರ ಪಾವತಿಸಲು ಕ್ರಮ ಕೈಗೊಳ್ಳತಕ್ಕದ್ದು.
 • ಹೀಗೆ ಸಲ್ಲಿಸಲಾದ ಎಲ್ಲ ಬಿಲ್ಲುಗಳು ಮತ್ತು ವೆಚ್ಚದ ಸಂಬಂಧದಲ್ಲಿ ಆ ಬಿಲ್ಲಿನಲ್ಲಿ ಕ್ಲೇಮ್ ಮಾಡಲಾಗುತ್ತಿರುವ ವೆಚ್ಚವನ್ನು ಹಿಂದಿನ ಅಥವಾ ಈಗಿನ ಇತರ ಯಾವುದೇ ಬಿಲ್ಲಿನಲ್ಲಿ ಕ್ಲೇಮ್ ಮಾಡಿಲ್ಲ ಎನ್ನುವ ಒಂದು ನಿರ್ಧಿಷ್ಠ ಪ್ರಮಾಣ ಪತ್ರ ಒಳಗೊಂಡಿರತಕ್ಕದ್ದು.
 • ಸಂಧರ್ಭಾನುಸಾರವಾಗಿ ಸಂಘದ ಕಛೇರಿಯಲ್ಲಿ ನಿಯೋಜಿಸಲಾದ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧೀಕ್ಷಕ ವೃಂದದ ಸಿಬ್ಬಂಧಿಯಿಂದ (ನಿವೃತ್ತ) ಸದರಿ ಬಿಲ್ಲಿನಲ್ಲಿ ಒಳಗೊಂಡಿರುವ ವಿವರಗಳು ಸಂಘದ ಯೋಜನೆ, ಮಾಡಲಾಗಿರುವ ಆಯವ್ಯಯ, ಹಂಚಿಕೆಗಳ ಕ್ಲೇಮು ಮಾಡಲಾಗಿರುವ ಮೊತ್ತದ ಯತಾರ್ಥತೆಯನ್ನು ಕುರಿತಂತೆ ಪರಿಶೀಲನೆ ಮಾಡಿ ಸಂಬಂಧಿತ ಅಗತ್ಯತೆಗಳನ್ನು ಪೂರೈಸಲಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಂಡ ಮೇಲೆ ಬಿಲ್ಲುಗಳನ್ನು ಹಣ ಪಾವತಿಗಾಗಿ ಅಂಗೀಕರಿಸುವುದು.
 • ಅಂಗೀಕರಿಸಿದ ಬಿಲ್ಲುಗಳ ಸಂಬಂಧದಲ್ಲಿನ ಪಾವತಿಗಳನ್ನು ಸಂದರ್ಭಾನುಸಾರ ಕಾರ್ಯದರ್ಶಿಯವರು ಅನುಸೂಚಿತ ಬ್ಯಾಂಕಿನಲ್ಲಿ ತೆರೆಯಲಾಗಿರುವ ಸಂಘದ ನಿಧಿಯ ಖಾತೆಗಳ ಮುಖಾಂತರ ಡ್ರಾ ಮಾಡಿದ ಚೆಕ್‍ಗಳ ಮುಖಾಂತರ ಮಾಡಲಾಗುವುದು.
 • ಅವುಗಳನ್ನು ಪಾವತಿ ಮಾಡಿದ ತಕ್ಷಣವೆ ಎಲ್ಲ ಬಿಲ್ಲುಗಳನ್ನು ಮತ್ತು ಪೂರಕ ಓಚರಗಳನ್ನು ರದ್ದುಗೊಳಿಸಿ ನಿರ್ವಹಿಸುವುದು.

ಅಧ್ಯಾಯ-5
ಸಂಘದ ಅನುದಾನದ ಲೆಕ್ಕ ಪರಿಶೋಧನೆ

16. ಸಂಘದ ಅನುದಾನದ ಲೆಕ್ಕಪತ್ರಗಳ ಲೆಕ್ಕಪರಿಶೋಧನೆ:

 • ಸಂಘವು ನಿಯೋಜಿಸಿದ ಚಾರ್ಟೆಡ್ ಅಕೌಂಟೆಂಟ್‍ರವರಿಂದ ಮುಕ್ತಾಯಗೊಂಡಿರುವ ಆರ್ಥಿಕ ವರ್ಷದಲ್ಲಿ ಸಂಘಕ್ಕೆ ಬಿಡುಗಡೆಯಾದ ಅನುದಾನದ ವೆಚ್ಚದ ವಿವರಗಳ ಲೆಕ್ಕಪರಿಶೋಧನೆಯನ್ನು ಮಾಡಿಸತಕ್ಕದ್ದು.
 • ಸಂಘದ ಲೆಕ್ಕಪತ್ರಗಳನ್ನು ಸರ್ಕಾರದ ಸ್ಥಳಿಯ ಲೆಕ್ಕಪರಿಶೋಧನಾ ಇಲಾಖೆಯ ಲೆಕ್ಕಪರಿಶೋಧನೆಗೆ ಒಳಪಟ್ಟಿರತಕ್ಕದ್ದು.
 • ಸರ್ಕಾರವು ಸಂಘದ ಲೆಕ್ಕಪತ್ರ ಪರಿಶೋಧನೆಗೆ ಆದೇಶಿಸಿದಾಗ ಸರ್ಕಾರದಿಂದ ನಿಯೋಜಿತ ಲೆಕ್ಕಪರಿಶೋಧಕರಿಗೆ ಲೆಕ್ಕಪರಿಶೋಧನೆ ಉದ್ದೇಶಕ್ಕಾಗಿ ಅಗತ್ಯಪಡಿಸಬಹುದಾದಂತಹ ಮಾಹಿತಿಯನ್ನು ಒದಗಿಸತಕ್ಕದ್ದು.

ಅಧ್ಯಾಯ-6

17. ವರದಿಗಳು:

 • ಸಂಘವು ಪ್ರತಿವರ್ಷ ಜುಲೈ ಅಂತ್ಯದ ಒಳಗಾಗಿ ಲೆಕ್ಕಪರಿಶೋಧನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
 • ಸರ್ಕಾರವು ನಿಯಮಿಸಲಾದ ವಿಷಯಗಳನ್ನು ಒಳಗೊಳ್ಳುವ ಮತ್ತು ಯೋಜಿಸಿದ, ಕೈಗೊಂಡ ಮತ್ತು ಪೂರ್ಣಗೊಳಿಸಿದ ಪ್ರಧಾನ ಕಾರ್ಯಚಟುವಟಿಕೆಗಳು, ಹಣಕಾಸು ಪರಿಸ್ಥಿತಿ, ಸಿಬ್ಬಂಧಿ ಮತ್ತು ಅಧಿಕಾರಿಗಳು ಹಾಗೂ ಇತರ ಬಗೆಯ ವಿಷಯಗಳನ್ನು ಒಳಗೊಂಡಿರುವ ವಾರ್ಷಿಕ ಆಡಳಿತ ವರದಿಯನ್ನು ಸಿದ್ಧಪಡಿಸಿ ಸಂಘದ ಆಡಳಿತ ಮಂಡಳಿಯ ಅನುಮೋದನೆ ಪಡೆದು ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು. ಸರ್ಕಾರವು ಅಂತಹ ವರದಿಯನ್ನು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸುವಂತೆ ಮಾಡಬಹುದು.
 • ಸಂಘದ ಕಾರ್ಯದರ್ಶಿಯು ಉದ್ದೇಶಿತ ಅಥವಾ ಚಾಲ್ತಿಯಲ್ಲಿರುವ ಯೋಜನೆಗಳ ಸಂಬಂಧದಲ್ಲಿ ಸರ್ಕಾರವು ಆಗಿಂದಾಗ್ಗೆ ಅಗತ್ಯಪಡಿಸಬಹುದಾದ ಅಥವಾ ನಿರ್ದೇಶಿಸಬಹುದಾದಂತಹ ಸಮಯದೊಳಗೆ ಅಂತಹ ನಮೂನೆಯಲ್ಲಿ ಮತ್ತು ಅಂತಹ ರೀತಿಯಲ್ಲಿ ಅಂಕಿ ಅಂಶಗಳನ್ನು ಮತ್ತು ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
 • ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ ಸರ್ಕಾರವು ವಾರ್ಷಿಕ ಆಡಳಿತ ವರದಿಗಳು, ಪ್ರಗತಿ ವರದಿಗಳು, ಬಜೆಟ್ ಯೋಜನೆಗಳು, ಲೆಕ್ಕಪತ್ರಗಳು ಮತ್ತು ಅದೇ ಬಗೆಯ ಇತರ ವಿಷಯಗಳಲ್ಲಿ ಒಳಗೊಳ್ಳಬೇಕಾದ ವಿಷಯಗಳ ರೀತಿ ಮತ್ತು ವಿಷಯಗಳನ್ನು ಮಾರ್ಪಾಡು ಮಾಡಬಹುದು.