• ಬೀದರ್ ಕೋಟೆ

  ಕಟ್ಟಿದವರು: ಬಹ್‌ಮನಿ ಸಂಸ್ಥಾನದ ಬಹ್‌ಮನ್ ಅಲಾ-ಉದ್-ದಿನ್, ಕಟ್ಟಿದ್ದು: 1424 ರಲ್ಲಿ

  ಕರ್ನಾಟಕದ ದಕ್ಷಿಣ ಪ್ರಸ್ಥಭೂಮಿಯ ಬೀದರ್ ನಗರದಲ್ಲಿದೆ. ಬಹುಮನಿ ಮನೆತನದ ಸುಲ್ತಾನ್ ಅಲ್-ಉದ್-ದಿನ್ ಬಹಮನ್ ಗುಲ್ಬರ್ಗಾದಿಂದ ಬೀದರ್‌ಗೆ ತನ್ನ ರಾಜಧಾನಿಯನ್ನು ೧೪೨೭ರಲ್ಲಿ ವರ್ಗಾಯಿಸಿಕೊಂಡ ಮತ್ತು ಈ ಕೋಟೆಯನ್ನೂ ಇತರೆ ಇಸ್ಲಾಮಿಕ್ ಸ್ಮಾರಕಗಳನ್ನೂ ಕಟ್ಟಿಸಿದ. ಬೀದರ್ ಕೋಟೆಯ ಒಳಗೆ ೩೦ಕ್ಕೂ ಹೆಚ್ಚು ಸ್ಮಾರಕಗಳಿವೆ.

  ಕೋಟೆ, ನಗರ ಮತ್ತು ಜಿಲ್ಲೆಯ ಹೆಸರು ಬೀದರ್‌ ಹೆಸರಿನಿಂದಲೇ ಹೆಸರಿಸಲ್ಪಡುತ್ತವೆ. ನಗರ ಮತ್ತು ಕೋಟೆ ಆಯತಾಕಾರದ ಪ್ರಸ್ಥಭೂಮಿಯ ಅಂಚಿನಲ್ಲಿದ್ದು, 22 miles (35 km) ಉದ್ದ ಮತ್ತು 12 miles (19 km) ಅಗಲದಷ್ಟು ವಿಶಾಲವಾಗಿದೆ. ಒಟ್ಟಾರೆ 12 square miles (31 km2) ವಿಸ್ತಾರವನ್ನು ಆಕ್ರಮಿಸಿಕೊಂಡಿದೆ. ಕಲ್ಯಾಣಿ ಚಾಲುಕ್ಯರ ಪ್ರಾಚೀನ ರಾಜಧಾನಿ ಕಲ್ಯಾಣಿ (ಬಸವಕಲ್ಯಾಣ) ಬೀದರ್‌ನ ದಕ್ಷಿಣಕ್ಕೆ 40 miles (64 km) ದೂರದಲ್ಲಿದೆ.

 • ನರಸಿಂಹ ಜಿರಾ

  300 ಅಡಿಗಳಷ್ಟು ದೂರ ಎದೆಮಟ್ಟದ ಉಗುರು ಬೆಚ್ಚಗಿನ ನೀರು.

  ಕ್ರಿ.ಪೂರ್ವ 400ಕ್ಕಿಂತಲೂ ಹಿಂದಿನ ಇತಿಹಾಸ ಹೊಂದಿರುವ ಈ ದೇವಾಲಯದಲ್ಲಿ ಮಹಾವಿಷ್ಣುವಿನ ಅವತಾರವಾದ ಉಗ್ರನರಸಿಂಹನು ಇಲ್ಲಿ ನೆಲೆಸಿದ್ದಾನೆ. ದೇವಾಲಯದ ಸುತ್ತಲೂ ಹಚ್ಚ ಹಸಿರಿನ ಪರ್ವತಗಳು, ಪ್ರಶಾಂತ ವಾತಾವರಣ ಭಕ್ತರನ್ನು ಕೈಬೀಸಿ ಕರೆಯುತ್ತದೆ. ಬೀದರ್‌ ಜಿಲ್ಲೆಯ ಮಂಗಳ ಪೇಟ್‌ ಎಂಬಲ್ಲಿ ಈ ಗುಹಾಕ್ಷೇತ್ರವಿದೆ. ಗುಹೆಯಲ್ಲಿಯೇ ಎದೆಮಟ್ಟವಿರುವ ನೀರಿನ ಆಳದಲ್ಲಿ ಇಳಿದು 600 ಮೀಟರ್‌ ನಡೆದುಕೊಂಡು ಹೋಗಿ ಗರ್ಭಗುಡಿಯಲ್ಲಿ ನೆಲೆಸಿರುವ ನರಸಿಂಹನ ಉದ್ಭವ ಮೂರ್ತಿಯನ್ನು ದರ್ಶನ ಮಾಡಬೇಕು. ನರಸಿಂಹ ಸ್ವಾಮಿಯ ಪಾದ ಕಮಲದಿಂದ ನೀರುವ ಪ್ರವಹಿಸುವ ಕಾರಣದಿಂದಾಗಿ ಈ ಕ್ಷೇತ್ರವನ್ನು ಜಲ ನರಸಿಂಹ ಸ್ವಾಮಿ ದೇವಾಲಯವೆಂದೂ ಕರೆಯುತ್ತಾರೆ.

  ಪುರಾಣದ ಪ್ರಕಾರ ಶಿವನು ಈ ಗುಹೆಯಲ್ಲಿ ತಪಸ್ಸು ಮಾಡುತ್ತಿರುವಾಗ ಜಲಾಸುರನೆಂಬ ರಾಕ್ಷಸನು ತಪಸ್ಸನ್ನು ಭಗ್ನಗೊಳಿಸಲು ಮುಂದಾಗುತ್ತಾನೆ. ಆಗ ಲಕ್ಷ್ಮೀ ನರಸಿಂಹ ಸ್ವಾಮಿಯು ಜಲಾಸುರನನ್ನು ಸಂಹಾರ ಮಾಡಲು ಮುಂದಾದಾಗ ಜಲಾಸುರನು ಸ್ವಾಮಿಯಲ್ಲಿ'ತಮ್ಮ ಪಾದ ಕಮಲದಲ್ಲಿ ನೀರಾಗಬೇಕು' ಎನ್ನುವ ಕೋರಿಕೆಯನ್ನು ಮುಂದಿಡುತ್ತಾನೆ. ಇದಕ್ಕೆ ಒಪ್ಪಿದ ನರಸಿಂಹ ಸ್ವಾಮಿಯು ತನ್ನ ಪಾದ ಕಮಲದಡಿ ನೀರಾಗುವಂತೆ ಅನುಗ್ರಹಿಸುತ್ತಾನೆ. ಜಲಾಸುರನು ತನ್ನ ಹೆಸರನ್ನು ಬಳಸಿ ಈ ಕ್ಷೇತ್ರವನ್ನು ಭಕ್ತರು ಕರೆಯುವಂತಾಗಬೇಕು ಎಂದು ವಿನಂತಿ ಮಾಡಿಕೊಂಡದ್ದರಿಂದ ಈ ಪುಣ್ಯ ಕ್ಷೇತ್ರಕ್ಕೆ ಜಲ ನರಸಿಂಹಸ್ವಾಮಿ ಎಂಬ ಹೆಸರು ಬಂದಿತು.

 • ಗುರುದ್ವಾರ ನಾನಕ್ ಝೀರಾ ಸಾಹಿಬ್

  ಪ್ರತಿವರ್ಷ ಸುಮಾರು 4-5 ಲಕ್ಷ ಯಾತ್ರಾರ್ಥಿಗಳು ಈ ಗುರುದ್ವಾರಕ್ಕೆ ಭೇಟಿ ನೀಡುತ್ತಾರೆ.

  ಸಿಖ್ ಗುರುನಾನಕ್‌ಗೆ ಸಮರ್ಪಿತವಾದ ನಾನಕ್ ಝೀರಾ ಬೀದರ್ ಗುರುದ್ವಾರವು ಐತಿಹಾಸಿಕ ದೇವಾಲಯವಾಗಿದ್ದು, ಇದು ಉತ್ತರ ಕರ್ನಾಟಕದ ಬೀದರ್‌ನಲ್ಲಿದೆ. ಶ್ರೀ ಗುರು ನಾನಕ್ ದೇವ್ ಜೀ, ಶ್ರೀ ಗುರು ಹರ್ಗೋಬಿಂದ್ ಸಾಹಿಬ್ ಜೀ ಮತ್ತು ಗುರು ತೇಗ್ ಬಹದ್ದೂರ್ ಜೀ ಯವರ ಆಗಮನದಿಂದ ಪವಿತ್ರವಾದ ಸ್ಥಳವಾಗಿದ್ದು , ಪ್ರತೀ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

  ಗುರುನಾನಕ್‌ ಅವರ ಸಹಚರರೊಂದಿಗೆ ಬೀದರ್ ಹೊರವಲಯದಲ್ಲಿ ತಂಗಿದ್ದರು. ಗುರು ತಾತ್ಕಾಲಿಕವಾಗಿ ವಾಸಿಸುತ್ತಿದ್ದ ಆ ಸ್ಥಳ ಈಗ ನಾನಕ್ ಝೀರಾ ಬೀದರ್ ಗುರುದ್ವಾರ ಎಂದೇ ಪ್ರಸಿದ್ಧಿ ಪಡೆದಿದೆ. ಬೀದರ್‌ನಲ್ಲಿ ಅವರು ವಾಸವಾಗಿದ್ದಾಗ ಗುರುಗಳ ಧರ್ಮೋಪದೇಶಗಳು ಮತ್ತು ಬೋಧನೆಗಳು ಬಹಳಷ್ಟು ಅನುಯಾಯಿಗಳನ್ನು ಆಕರ್ಷಿಸಿದವು ಮತ್ತು ಶೀಘ್ರದಲ್ಲೇ ಜನರು ಅವರ ಆಶೀರ್ವಾದ ಪಡೆಯಲು ಆರಂಭಿಸಿದ್ದರು.