• ಬೀದರ್

    ಬೀದರ್ ಒಂದು ಡೆಕ್ಕನ್ ಪ್ರಸ್ಥಭೂಮಿಯಲ್ಲಿರುವ, ಬೆಟ್ಟದ ತುದಿಯಲ್ಲಿರುವ ನಗರ. ಇದು ಭಾರತದ ಕರ್ನಾಟಕ ರಾಜ್ಯದ ಪೂರ್ವಭಾಗದಲ್ಲಿದೆ. ಇದು ಬೀದರ್ ಜಿಲ್ಲೆಯ ಜಿಲ್ಲಾಕೇಂದ್ರ. ಬೀದರ್ ಜಿಲ್ಲೆ ಮಹಾರಾಷ್ಟ್ರ ಮತ್ತು ತೆಲಂಗಾಣದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಇದು ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ ಮತ್ತು ಇದು ಬೀದರ್ ಮಹಾನಗರ ವಲಯಕ್ಕೆ ಸೇರುತ್ತದೆ. ಈ ನಗರವು ಅನೇಕ ವಾಸ್ತುಶಿಲ್ಪ, ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರುವ ಅನೇಕ ಸ್ಥಳಗಳಿಗೆ ಹೆಸರುವಾಸಿಯಾಗಿದೆ.
  • ಕಲಬುರಗಿ

    ಕಲಬುರಗಿ ‘ಕಲಬುರ್ಗಿ’, ‘ಗುಲಬರ್ಗ’ ಎಂದು ಕರೆಯಲಾಗುತ್ತಿತ್ತು, ಅಂದರೆ ಕನ್ನಡದಲ್ಲಿ ಕಲ್ಲಿನ ಭೂಮಿ ಎಂದರ್ಥ. ಕಲಬುರಗಿ ಜಿಲ್ಲೆಯು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿದೆ, ಮುಂಚಿನ ದಿನಗಳಲ್ಲಿ, ಕಲಬುರಗಿ ಹೈದರಾಬಾದ್ ಕರ್ನಾಟಕ ಪ್ರದೇಶದ ಒಂದು ಜಿಲ್ಲೆಯಾಗಿತ್ತು ಮತ್ತು ರಾಜ್ಯಗಳ ಪುನರ್ ಸಂಘಟನೆಯ ನಂತರ ಕರ್ನಾಟಕ ರಾಜ್ಯದ ಭಾಗವಾಯಿತು.
  • ಯಾದಗಿರಿ

    ಈ ಹಿಂದೆ ಈ ಪ್ರದೇಶವನ್ನು "ಯಾದವ" ಎಂಬ ರಾಜವಂಶದವರು ಆಳುತ್ತಿದ್ದರಂತೆ . "ಯಾದವರ" ಈ ವಂಶವನ್ನು ಕೆಲವು ಕಡೆ ಯದುವಂಶ ಎಂದು ಕೂಡಾ ಕೆಲವು ಕಡೆ ಉಲ್ಲೆಖಿಸಲಾಗಿದೆ ಎಂಬುವದು ಬಲ್ಲ ಮೂಲಗಳಿಂದ ತಿಳಿಯುತ್ತದೆ. ಯಾದಗಿರಿ, ಕ್ರಿ. ಪೂ 1347 ರಿಂದ 1425 ರ ವರೆಗೆ ಯಾದವರ ರಾಜಧಾನಿಯಾಗಿತ್ತು. ಆಕಾಲದ ಪ್ರಮುಖರಾದ ಸಂತವರು, ಚಾಲುಕ್ಯರು, ರಾಷ್ಟ್ರಕೂಟರು, ಶಾಹಿಗಳು, ಆದಿಲ್ ಶಾಹಿಗಳು, ನಿಜಾಮ್ ಶಾಹಿಗಳು ಯಾದಗಿರಿಯನ್ನ ಆಳಿದ್ದಾರೆ.
  • ರಾಯಚೂರು

    ರಾಯಚೂರು ಜಿಲ್ಲೆಯ ಜನಸಂಖ್ಯೆ ೨೦೧೧ ರ ಜನಗಣತಿಯಂತೆ ೧೯,೨೮,೮೧೨. ರಾಯಚೂರು ಜಿಲ್ಲೆಯಲ್ಲಿ 8 ತಾಲೂಕುಗಳಿವೆ: ರಾಯಚೂರು, ದೇವದುರ್ಗ, ಸಿಂಧನೂರು, ಮಾನವಿ ಸಿರವಾರ, ಮಸ್ಕಿ., ,ಲಿಂಗಸೂಗೂರು. ಮತ್ತು ಅರಕೇರಾ ತಾಲೂಕು ಗಳು, ಈ ಜಿಲ್ಲೆಯ ಜಿಲ್ಲಾಕೇಂದ್ರ ರಾಯಚೂರು ನಗರ. ಇದು ಬೆಂಗಳೂರಿನಿಂದ ೪೦೯ ಕಿಮೀ ದೂರದಲ್ಲಿದೆ.
  • ಕೊಪ್ಪಳ

    ಕೊಪ್ಪಳವು ಕರ್ನಾಟಕ ರಾಜ್ಯದ ಈಶಾನ್ಯ ಭಾಗದಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನಡುವಿನ ಪ್ರದೇಶದಲ್ಲಿದೆ. ಹಿಂದಿನ ರಾಯಚೂರು ಜಿಲ್ಲೆಯನ್ನು ವಿಭಜಿಸಿ 1997ರಲ್ಲಿ ಹೊಸ ಜಿಲ್ಲೆ ಕೊಪ್ಪಳವನ್ನು ರಚಿಸಲಾಯಿತು. ಜಿಲ್ಲೆಯಲ್ಲಿ ೨೦ ಹೋಬಳಿಗಳು, ೬೧೮ ಗ್ರಾಮಗಳಿವೆ. ಈ ಜಿಲ್ಲೆಯನ್ನು ಉತ್ತರದಲ್ಲಿ ಬಾಗಲಕೋಟೆ ಮತ್ತು ರಾಯಚೂರು, ಪೂರ್ವದಲ್ಲಿ ರಾಯಚೂರು ಮತ್ತು ಬಳ್ಳಾರಿ, ದಕ್ಷಿಣದಲ್ಲಿ ಬಳ್ಳಾರಿ ಹಾಗೂ ಪಶ್ಚಿಮದಲ್ಲಿ ಗದಗ ಜಿಲ್ಲೆಗಳು ಸುತ್ತುವರಿದಿವೆ.
  • ಬಳ್ಳಾರಿ

    ಬಳ್ಳಾರಿ ಪ್ರಸಿದ್ಧ ಸ್ಥಳಗಳಲ್ಲಿ ಹಂಪೆ ಮತ್ತು ಅಲ್ಲಿರುವ ವಿಜಯನಗರ ಸಾಮ್ರಾಜ್ಯದ ಅವಶೇಷಗಳು ಮುಖ್ಯವಾದವು. ಬಳ್ಳಾರಿ ಜಿಲ್ಲೆಯ ಇನ್ನೊಂದು ಪ್ರಮುಖ ಪಟ್ಟಣ ಎಂದರೆ ಹೊಸಪೇಟೆ - ಇಲ್ಲಿರುವ ತುಂಗಭದ್ರಾ ಅಣೆಕಟ್ಟು ಕೃಷಿಗೆ ನೀರನ್ನು ಒದಗಿಸುತ್ತದೆ. ಬೊಮ್ಮಘಟ್ಟ ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧವಾಗಿದೆ. ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲದ ದಶಮಿಯಂದು ರಥೋತ್ಸವ ಇರುತ್ತದೆ ಹಾಗೂ ಸಂಡೂರು ತಾಲೂಕಿನ ಸೋವೇನಹಳ್ಳಿಯಲ್ಲಿ ಸಾರಿದುರ್ಗಾಂಭ ಹಾಗೂ ಶ್ರೀ ಸಿದ್ದಲಿಂಗೇಶ್ವರ ರಥೋತ್ಸವಗಳು ವೈಭವದಿಂದ ಜರುಗುತ್ತವೆ.