• ಬುದ್ಧ ವಿಹಾರ

    ಬುದ್ಧನ ಮೂರ್ತಿ: ಕುಳಿತ ಬುದ್ಧನ ಮೂರ್ತಿ ನೋಡಲು ಬಲು ಆಕರ್ಷಣೀಯವಾಗಿದೆ. 400 ಪಂಚ ಲೋಹದಿಂದ ಈ ಮೂರ್ತಿಯನ್ನು ಸಿದ್ದಪಡಿಸಲಾಗಿದೆ. ಅದಕ್ಕೆ ಚಿನ್ನದ ಲೇಪನ ಮಾಡಲಾಗಿದೆ.

    70 ಎಕರೆ ಪ್ರದೇಶ, 32,450 ಚದರ ಅಡಿ ವ್ಯಾಪ್ತಿಯಲ್ಲಿ ನೆಲೆ ನಿಂತು, ದೇಶ ವಿದೇಶದೆಲ್ಲೆಡೆ ಸುದ್ದಿ ಮಾಡಿದೆ. ಈ ಭವ್ಯ ವಿಹಾರಕ್ಕೆ 8 ಕೋಟಿ ರೂಪಾಯಿ ವೆಚ್ಚಮಾಡಲಾಗಿದೆ. ವಿಹಾರದ ಶಿಲ್ಪಕಲೆಗಳು ಅಜಂತಾ ಹಾಗೂ ಎಲ್ಲೋರಾ ಮಾದರಿಯನ್ನೇ ಪ್ರತಿಬಿಂಬಿಸುತ್ತವೆ. ಈ ವಿಹಾರಕ್ಕೆ ಆಧಾರವಾಗಿ 170 ಕಂಬಗಳು ನಿಂತಿರುವುದು ಒಂದು ಹಿರಿಮೆ. ವಿಹಾರದ ಮೊದಲ ಮಹಡಿಯಲ್ಲಿ ಮನೋಹರ ಕೆತ್ತನೆಯನ್ನು ಒಳಗೊಂಡ ಎರಡು ಬುದ್ಧನ ಮೂರ್ತಿಗಳಿವೆ. ನೆಲ ಮಹಡಿಯಲ್ಲಿ ಕಪ್ಪು ವಿಗ್ರಹದ ಆರು ಅಡಿ ಎತ್ತರದ ಬುದ್ಧನ ಮೂರ್ತಿ ಇರುವುದನ್ನು ನೋಡಬಹುದು.

    ವಿಹಾರದ ನೆಲಮನೆಯಲ್ಲಿ ಸುಮಾರು 2 ಸಾವಿರ ಭಕ್ತರು ಏಕ ಕಾಲದಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸುವಷ್ಟು ಸ್ಥಳಾವಕಾಶವಿದೆ. ಇಲ್ಲಿರುವ ಕುಳಿತ ಬುದ್ಧನ ಮೂರ್ತಿಯೂ ಬಹಳ ಆಕರ್ಷಕವಾಗಿದೆ. ಅಶೋಕನ ಮಾದರಿಯಂತೆ ನಾಲ್ಕು ದಿಕ್ಕುಗಳಲ್ಲಿ ಕಂಬಗಳನ್ನು ಇಡಲಾಗಿದೆ. ಈ ವಿಹಾರಕ್ಕೆ ಒಟ್ಟು ಆರು ದ್ವಾರಗಳಿವೆ.

  • ಶರಣಬಸವೇಶ್ವರ ದೇವಸ್ಥಾನ

    ಈ ದೇವಸ್ಥಾನ ದಾಸೋಹಿ ಮತ್ತು ಶರಣ ಶ್ರೀ ಶರಣಬಸವೇಶ್ವರರಿಗೆ ಸಮರ್ಪಿಸಲಾಗಿದೆ.

    ಮೂಲತಃ ಜೀವರ್ಗಿ ತಾಲ್ಲೂಕಿನ ಅರಳಗುಂಡಿಯವರಾದ ಶರಣಬಸವೇಶ್ವರರು ( ೧೭೪೬ -೧೮೨೨) ವಿಶ್ವಗುರು ಬಸವೇಶ್ವರ ಅವರಿಂದ ಸ್ಥಾಪಿತ ಲಿಂಗಾಯತ ಧರ್ಮದ ಸಂದೇಶಗಳ ಬಗೆ ಪ್ರಚಾರ ಮಾಡುತ್ತ ಗುಲಬರ್ಗಾಕ್ಕೆ ಬಂದು ನೆಲೆ ನಿಂತು ಅದನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ತ್ರಿವಿಧ ದಾಸೋಹ ಮೆರೆದು ಮಡಿದರು. ಶರಣ ಬಸವೇಶ್ವರರ ಸಮಾಧಿಗೆ ನಂತರದಲ್ಲಿ ಹೋಪುರ ರಚಿಸಿದ್ದು ಇದೇ ಇಂದಿನ ಶರಣಬಸವೇಶ್ವರ ದೇವಾಲಯವಾಗಿದೆ.

    ಶರಣ ಬಸವೇಶ್ವರರಿಗೆ ಕಲ್ಬುರ್ಗಿಯಲ್ಲಿ ನೆಚ್ಚಿನ ಶಿಷ್ಯರಾಗಿ ನಿಂತವರು ದೊಡ್ಡಪ್ಪ ಶರಣರು.ಶರಣಬಸವೇಶ್ವರರ ಸಮಾಧಿ ಇರುವ ಗರ್ಭ ಗೃಹದಲ್ಲಿ ಗದ್ದುಗೆಯ ಮೇಲೆ ಗುರು ಶಿಷ್ಯರ ಅವಿನಾಭಾವ ಸಂಬಂಧ ಹಾಗೂ ಸಾಮರಸ್ಯಗಳನ್ನು ಸೂಚಿಸಲು ಶರಣಬಸವೇಶ್ವರ ಹಾಗೂ ಅವರ ಗುರುಗಳ ಬೆಳ್ಳಿಮುಖಗಳನ್ನುಳ್ಳ ಜೋಡಿ ಮೂರ್ತಿಯನ್ನು ಪ್ರಾತಿನಿಧಿಕವಾಗಿ ಪ್ರತಿಷ್ಠಾಪಿಸಿದ್ದು, ಇಂದು ಇದೇ ಭಕ್ತರ ಆರಾಧನಾ ಬಿಂದುವಾಗಿದೆ.

    ಇದನ್ನು ಬಳಸಿ ವಿಶಾಲವಾದ ಸಭಾ ಮಂಟಪವಿದ್ದು ಪ್ರದಕ್ಷಿಣಾ ಪಥವೂ ಇದೆ. ಅರೆ ಕಂಬ, ಬಿಡ ಕಂಬ, ಜೋಡಿ ಕಂಬ ಹಾಗೂ ೩೬ ಕಮಾನುಗಳನ್ನು ಬಳಸಿ ನಿರ್ಮಿಸಿದ್ದು ಹಾಗೂ ವಿಶಿಷ್ಟ ಹೂ – ಬಳ್ಳಿಗಳಿಂದ ನಿರ್ಮಿಸಿದ್ದು, ಛಾವಣಿಯೂ ವಿಶಿಷ್ಟವಾಗಿದೆ.ಶ್ರಾವಣ ಮಾಸದಲ್ಲಿ ನಡುವಣ ಸೋಮವಾರ ಶರಣಬಸವೇಶ್ವರರ ಪಲ್ಲಕ್ಕಿ ಉತ್ಸವ ಜರುಗುತ್ತಿದ್ದು, ಅಂದು ಸಾವಿರಾರು ಜನ ಬಂದು ಪಾಲ್ಗೊಳ್ಳುತ್ತಾರೆ. ಶರಣ ಬಸವೇಶ್ವರ ಮಹಾದಾಸೋಹ ಪೀಠವು ಇಂದು ಜ್ಞಾನದಾಸೋಹ ಕಾರ್ಯದಲ್ಲೂ ತನ್ನನ್ನು ತೊಡಗಿಸಿಕೊಂಡಿದೆ.

  • ಜಾಮಾ ಮಸೀದಿ

    ಮಾದರಿ: ಇಸ್ಲಾಮಿಕ್ ವಾಸ್ತುಶಿಲ್ಪ, ಶೈಲಿ: ಬಹಮನಿ ಸುಲ್ತಾನತೆ, ಕ್ರಿ.ಶ 1367 ಪೂರ್ಣಗೊಂಡಿದೆ.

    ಇದು ದಕ್ಷಿಣ ಏಷ್ಯಾದ ಮಸೀದಿ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ. ಜಾಮಿಯಾ ಮಸೀದಿ ಗುಲ್ಬರ್ಗಾ ಅವರ ಕಮಾನುಗಳ ವಿನ್ಯಾಸವು ಭಾರತದ ಹೈದರಾಬಾದ್‌ನ ಸ್ಪ್ಯಾನಿಷ್ ಮಸೀದಿಯ ಒಳಾಂಗಣದಲ್ಲಿ ಪ್ರತಿಫಲಿಸುತ್ತದೆ. ಇವು ಭಾರತದ ಎರಡು ಮಸೀದಿಗಳು ಮಾತ್ರ, ಅವು ಸ್ಪೇನ್‌ನ ಕಾರ್ಡೊಬಾದ ಗ್ರೇಟ್ ಕ್ಯಾಥೆಡ್ರಲ್-ಮಸೀದಿಗೆ ಒಳಾಂಗಣವನ್ನು ಹೊಂದಿವೆ.